Breaking News

ನಟ ಉಪೇಂದ್ರ ಅವರಿಗೆ ಬಿಗ್ ರಿಲೀಫ್…..

ಬೆಂಗಳೂರು: ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ಮಾಪಕ ಉಪೇಂದ್ರ ಅವರ ವಿರುದ್ಧ ಎರಡು ಪ್ರತ್ಯೇಕ ಠಾಣೆಗಳಲ್ಲಿ FIR ದಾಖಲಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ಹಲಸೂರುಗೇಟ್ ಪೊಲೀಸ್ ಠಾಣೆಗಳಲ್ಲಿ ನಟ ಉಪೇಂದ್ರ ಅವರ ವಿರುದ್ಧ ಎರಡು ಪ್ರತ್ಯೇಕ FIR ದಾಖಲಾಗಿದ್ದವು.ಇತ್ತೀಚೆಗೆ ಮೊದಲನೇ FIR ನಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಎರಡನೇ FIR ನಲ್ಲೂ ಕೂಡ ಕೋರ್ಟ್ ತಡೆ ನೀಡಿದ್ದು, ನಟ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಸಾಮಾಜಿಕ ಜಾಲತಾಣ ಒಂದರಲ್ಲಿ ನಟ ಉಪೇಂದ್ರ ಅವರು ಸಾಮಾನ್ಯವಾಗಿ ಮಾತನಾಡುವಾಗ ಗಾದೆ ಹೇಳುವಾಗ ಅವಹೇಳನಕಾರಿ ಪದ ಬಳಸಿದ್ದರು ಎನ್ನಲಾಗಿದ್ದು ಈ ಕುರಿತು ರಾಜ್ಯಾದ್ಯಂತ ನಟ ಉಪೇಂದ್ರ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಮೊದಲು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮೊದಲನೇ FIR ದಾಖಲಾಗಿದ್ದು, ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಎರಡನೇ FIR ದಾಖಲಾಗಿತ್ತು. ಇದೀಗ ಎರಡು FIR ಗಳಿಗೆ ಕೋರ್ಟ್ ತಡೆ ನೀಡಿದ್ದು, ನಟ ಉಪೇಂದ್ರ ಅವರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

Share News

About BigTv News

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *