ಕಲಘಟಗಿ : ಹೆತ್ತು ಕರಳು ನಿಧನ ಹೊಂದಿದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ತಕ್ಷಣ ಸಂಬಂಧಿಕರು ಮನೆಯವರು ಎಷ್ಟೇ ಸಮಾಧಾನ ಪಡಿಸಿದರೂ ಕೇಳದೆ ತನ್ನ ಚಿಕ್ಕಪ್ಪನ ಮನೆಯ ಬಾತ್‌ರೂಮ್‌ನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ .
ಅನ್ನಪೂರ್ಣ ಮಾರುತಿ ಬಂಡಿವಡ್ಡರ ( 17 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಿಶ್ರಿಕೋಟಿ ಸರಕಾರಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ . ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

