ಧಾರವಾಡ:ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗ ಮಟ್ಟದ ಪದಾಧಿಕಾರಿಗಳ ಸಭೆಯು ಧಾರವಾಡದಲ್ಲಿ ಜರುಗಿತು.
ಬರುವ ಎಪ್ರಿಲ್ ತಿಂಗಳಲ್ಲಿ ಗ್ರಾಮೀಣ ಸಂಘದ ಸಮಾವೇಶ ನಡೆಸುವ ಕುರಿತು ಪೂರ್ವಭಾವಿಯಾಗಿ ವಿವಿಧ ಜಿಲ್ಲೆಗಳ ಪದಾಧಿಕಾರಿಗಳನ್ನು ಈ ಸಭೆಗೆ ಅಹ್ವಾನಿಸಲಾಗಿತ್ತು.
ಬೆಳಗಾವಿ ವಿಭಾಗೀಯ ಸಂಚಾಲಕರಾದ ಅಕ್ಬರಅಲಿ ಸೋಲಾಪೂರ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಗ್ರಾಮೀಣ ಶಿಕ್ಷಕರತ್ನ,ಸಾಧಕರಿಗೆ ಸನ್ಮಾನ,ಶಿಕ್ಷಕರಿಗೆ ಕವಿಗೋಷ್ಟಿ ,ಉತ್ತಮ ನಲಿಕಲಿ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಾದ್ಯಕ್ಷರಾದ ಅಶೋಕ ಎಂ ಸಜ್ಜನ ಮಾತನಾಡಿದರು.ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ ಎನ್.ಪಿ.ಎಸ್.(NPS )ರದ್ದುಪಡಿಸಿ, ಹಳೆಪಿಂಚಣಿಯನ್ನು ಜಾರಿಗೆ ತರಬೇಕು ಎಂದರು, ರಾಜ್ಯ ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ಬೆಳಗಾವಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ತಮ್ಮನಗೌಡ ಏಗನಗೌಡರ, ಮರಿತಮ್ಮಪ್ಪ ಅಕ್ಕಿ ಯಾದೂಸಾಬನವರ,ಉದಯ ಮೊರಬ,ವಿ ಜಿ ಮುದಿಗೌಡರ, ಆನಂದ ದುಂದೂರ,ಎಸ್ ಜಿ ಗೂಳಪ್ಪನವರ,ಎಸ್ ಎಸ್ ಧನಿಗೊಂಡ ಸೇರಿದಂತೆ ಬೆಳಗಾವಿ ವಿಭಾಗದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾ ಪ್ರದಾನ ಕಾರ್ಯದರ್ಶಿ ತಮ್ಮನಗೌಡ ಏಗನಗೌಡರ ಅವರುಗಳನ್ನು ಸನ್ಮಾನಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

