ವಿಜಯಪುರ : ನಗರ ಮತ್ತು ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು ಇದೀಗ ಜಿಲ್ಲಾಡಳಿತ ಬೆಳಿಗ್ಗೆ ಭೂಮಿ ಕಂಪಿಸಿರುವ ಕುರಿತು ಮಾಹಿತಿ ನೀಡಿದೆ..
ಇಂದು ಬೆಳಿಗ್ಗೆ 11: 21 ಕ್ಕೆ ಭೂಮಿ ಕಂಪಿಸಿದರ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ ಭೂಕಂಪನದ ಕೇಂದ್ರ ಬಿಂದೂ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶ್ಚಿಮೋತ್ತರ ಭಾಗದಲ್ಲಿ ಪತ್ತೆಯಾಗಿದ್ದು ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ತಿಳಿಸಿದೆ , ಭೂಮಿಯಿಂದ ಸುಮಾರು 10 ಕಿ. ಮೀ. ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಇದೊಂದು ಲಘು ಭೂಕಂಪವಾಗಿದ್ದು, ಕೇಂದ್ರ ಬಿಂದುವಿನಿಂದ ಏಳು ಕಿ. ಮೀ. ವ್ಯಾಪ್ತಿಯಲ್ಲಿ ಅನುಭವಕ್ಕೆ ಬರುತ್ತದೆ ಆದ್ದರಿಂದ ಯಾರೂ ಜನರು ಭಯ ಪಡುವ ಅಗತ್ಯವಿಲ್ಲ ಎಂದು ಬೆಂಗಳೂರಿನಲ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

