Breaking News

ವಕ್ಫ್ ಆಸ್ತಿ ಕುರಿತು ಬಿಜೆಪಿಯಿಂದ ವದಂತಿ ಹಬ್ಬಿಸುವ ಯತ್ನ: ಸಚಿವ ಝಮೀರ್ ಅಹ್ಮದ್

ಕಲಬುರಗಿ : ವಕ್ಫ್ ಆಸ್ತಿ ಕುರಿತು ಬಿಜೆಪಿ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದೆ ಇದರಿಂದ ಬಿಜೆಪಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಖಾನ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯಿಂದಲೂ ಇದೆ ವಕ್ಫ್ ಬಳಿ ಇರುವುದು ಸರಕಾರ ಕೊಟ್ಟಿರುವ ಜಮೀನಲ್ಲ, ಬದಲಿಗೆ ದಾನಿಗಳು ಕೊಟ್ಟಿರುವ ಜಮೀನಾಗಿದೆ. ಅದೀಗ ಮಂಡಳಿ ಬಳಿಯಿದೆ ಇಷ್ಟಾದರೂ ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಅದಕ್ಕಾಗಿಯೇ ಇಷ್ಟೆಲ್ಲಾ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಷ್ಟೇ ಅಲ್ಲ, ಸಾಮಾನ್ಯ ಜನರ ಆಸ್ತಿಗಳನ್ನೂ ವಕ್ಫ್ ಪಡೆದುಕೊಳ್ಳುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ವಕ್ಫ್ ಆಸ್ತಿಗಳಲ್ಲಿ ಹಲವರು ಮನೆ ಕಟ್ಟಿಕೊಂಡಿದ್ದಾರೆ. ಆದರೂ, ಅಂಥವರಿಗೆ ತೊಂದರೆ ಕೊಡಬಾರದು ಎಂದು ನಾನು ಹೇಳಿದ್ದೇನೆ ಎಂದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *