Breaking News

ಭದ್ರ ನಾಲೆಗಾಗಿ ರೈತರಿಂದ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ

ಸಾವಿರಾರು ಭೂ ಪ್ರದೇಶಕ್ಕೆ ನೀರೋದಿಗಿಸುವ ಭದ್ರ ನಾಲೆಗಾಗಿ ಚಿತ್ರದುರ್ಗದ ಕಾತ್ರಾಳ್ ಕೆರೆ ಅಚ್ಚುಕಟ್ಟುದಾರ ರೈತರಿಂದ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಆಕ್ರೋಶ ವ್ಯಕ್ತಪಡಿಸಿದರು. ಕಾತ್ರಾಳ್ ಕೆರೆ ಮಾರ್ಗವಾಗಿ ಜಗಳೂರಿಗೆ ಹೋಗುವ ಭದ್ರ ನಾಲೆಯನ್ನು ಮಾರ್ಗ ಬದಲಾವಣೆಗೆ ಜಗಳೂರು ರೈತರ ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಇಂದು ಭದ್ರ ಕಾಲುವೆ ಮಾರ್ಗ ಬದಲಾವಣೆ ವಿರೋಧಿಸಿದರು. ಕೆಲಕಾಲ ಹೆದ್ದಾರಿ ತಡೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತತೆ ಗೊಂಡಿತ್ತು. ಮುಂಜಾಗ್ರತ ಕ್ರಮವಾಗಿ ಪ್ರತಿಭಟನೆಗೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *