Breaking News

ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ


ಹುಬ್ಬಳ್ಳಿ :ಸುಸಜ್ಜಿತ ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಸಮಾಜ ಕಲ್ಯಾಣ ನಿರ್ಮಾಣ ಅಡಿಯಲ್ಲಿ ರಸ್ತೆ ನಿರ್ಮಾಣವನ್ನು ಮಾಡಲಾಗುತ್ತಿದ್ದು, ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಹೇಳಿದರು.

ಹುಬ್ಬಳ್ಳಿ ತಾಲೂಕಿನ ಪಾಳೇ ಗ್ರಾಮದಲ್ಲಿ ಎಸ್.ಸಿ.ಪಿ.ಟಿ.ಎಸ್. ಯೋಜನೆಯ ಅಡಿಯಲ್ಲಿ 30 ಲಕ್ಷ ರೂ.ಗಳ ಮೊತ್ತದ ರಸ್ತೆ ನಿರ್ಮಾಣದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ತಮ್ಮ ಗ್ರಾಮದಲ್ಲಿ ಹಲವಾರು ಯೋಜನೆಗಳನ್ನು ದೊರಕುವಂತೆ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದೇನೆ, ಈಗ ತಮ್ಮ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದೇನೆ ಎಂದು ಅವರು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಚನ್ನವ್ವ ಬ ಶಿವನಗೌಡ್ರ ಮಾತನಾಡಿ, ಸರಕಾರ ನೀಡಿದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಈ ಯೋಜನೆಗಳನ್ನು ನಮ್ಮ ಗ್ರಾಮಕ್ಕೆ ತಲುಪಿಸಿದ ಶಾಸಕರಾದ ಕುಸುಮಾವತಿ ಸಿ ಶಿವಳ್ಳಿಯವರಿಗೆ ಕೃತಜ್ಞತೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಸನಗೌಡ ಶಿವನಗೌಡ್ರ, ಪವಿತ್ರ ಯಲಿವಾಳ, ಮಲ್ಲನಗೌಡ ಜೀವನಗೌಡ, ಮಂಜು ಸರಸ್ವತಿ, ಗಂಗಾನಗೌಡ್ರ ಶಿವನಗೌಡ್ರ, ಗುರಪ್ಪ ಗಾಂಜಿ, ಮಂಜುನಗೌಡ ಹುಡೆದ, ಮಲ್ಲಿಕಾರ್ಜುನ ಭರಮಗೌಡ್ರ,ರಂಗಪ್ಪ ಮಾದರ, ಸಂತೋಷ ಸೊಟ್ಟಮ್ಮನವರ, ಖಾಶಿಮಸಾಬ ನದಾಫ್, ಆನಂದ ಪೂಜಾರ,‌ಸಾಧಿಕ ಮುಲ್ಲಾ, ಗ್ರಾಪಂ ಅಧ್ಯಕ್ಷ ಹನಮಂತಪ್ಪ ಖಂಡುನವರ, ಚನ್ನಪ್ಪಗೌಡ ಬಸನಗೌಡ, ಸಿದ್ದಪ್ಪ ಯಲಿವಾಳ,‌ಸೇರಿದಂತೆ ಮುಂತಾದವರು
ಮತ್ತಿತರರು ಉಪಸ್ಥಿತರಿದ್ದರು.

Share News

About admin

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *