Breaking News

ಜೀವನದಲ್ಲಿ ಕೊಟ್ಟು ಬದುಕುವುದನ್ನು ಕಲಿಯಬೇಕು : ಕೃತಾತ್ಮಾನಂದಜಿ

ಹುಬ್ಬಳ್ಳಿ: ಜೀವನದಲ್ಲಿ ಕೊಟ್ಟು ಬದುಕುವುದನ್ನು ಕಲಿಯಬೇಕು, ಅದರಲ್ಲಿ ಸಿಗುವ ಸುಖವೇ ಬೇರೆ ಎಂದು ಚಿನ್ಮಯ ಮಿಷನ್ ಸ್ವಾಮೀಜಿ ಕೃತಾತ್ಮಾನಂದಜಿ ಹೇಳಿದರು.

ಇಲ್ಲಿನ ಜೆ.ಸಿ.ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಎಲಿಜಿಬತ್ ಶ್ರೀನಿವಾಸ ಪ್ಯಾಟ್ಟೋನ ನಾಯ್ಡು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ
ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಅದರಿಂದ ಬಂದ ಲಾಭದಲ್ಲಿ ಎಲ್ಲರೂ ಹಂಚಿ ತಿನ್ನಬೇಕು. ಅಂತಹ ಕಾರ್ಯಕ್ಕೆ ನಾಯ್ಡು ಟ್ರಸ್ಟ್ ಉತ್ತಮ ನಿದರ್ಶನವಾಗಿದೆ. ಇಂತಹ ಚಾರಿಟೇಬಲ್ ಟ್ರಸ್ಟ್‌ಗಳು ಹೆಚ್ಚು ಆರಂಭಗೊಳುವ ಮೂಲಕ ಸಮಾಜದಲ್ಲಿರುವ ಬಡವರು, ನಿರ್ಗತಿಕರು ಹಾಗೂ ಪ್ರತಿಭಾನ್ವಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದರು.

ಉದ್ಯಮಿ ಜಿತೇಂದ್ರ ಮಜೇಥಿಯಾ ಮಾತನಾಡಿ, ನಾಯ್ಡು ಚಾರಿಟೇಬಲ್ ಟ್ರಸ್ಟ್ ಉತ್ತರೋತ್ತರವಾಗಿ ಬೆಳೆಯುವ ಮೂಲಕ ಸಮಾಜದಲ್ಲಿರುವವರಿಗೆ ಒಂದು ಕೊಡುಗೆ ನೀಡುವಂತಾಗಲಿ ಎಂದರು.

ವಿಭವ ಇಂಡಸ್ಟ್ರಿಜನ ಸಿಇಓ ನಂದಕುಮಾರ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗೆ ಸ್ಥಾಪಿಸಿರುವ ಟ್ರಸ್ಟ್ ಇದಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮಾದರಿಯಾಗುವಂತಾಗಬೇಕು. ಅಲ್ಲದೇ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂಬುದೇ ಈ ಟ್ರಸ್ ನ ಮುಖ್ಯ ಉದ್ದೇಶವಾಗಿದೆ ಇದರ ಎಂದರು.

ಒಂದೇ ವರ್ಷದಲ್ಲಿ ಡಾ. ಶ್ರೀನಿವಾಸ ಹಾಗೂ ಪತ್ನಿ ಎಲಿಜೆಬೆತ್ ಮೃತರಾದರು. ಅವರ ಕನಸನ್ನು ನನಸಾಗಿಸಲು ಅವರ ಸಹೋದರ ಸಂಬಂಧಿಯಾದ ಅಶೋಕ ನಾಯ್ಡು ಪಾಂಡುರಂಗ ನಾಯ್ಡು, ಆತ್ಮೀಯ ಸ್ನೇಹಿತರಾದ ಗಿರೀಶ ಉಪಾಧ್ಯಯ ಹಾಗೂ ಸಂಗಮನಾಥ ಪಾಟೀಲ ಅವರುಗಳು ಈ ಟ್ರಸ್ಟ್ ರಚಿಸಿ ಸಮಾಜ ಮುಖಿ ಕಾರ್ಯಗಳಿಗೆ
ಮುಂದಾಗಿದ್ದಾರೆ.

ಇದೇ ವೇಳೆ ಎಸ್.ಎಸ್ ‌ಎಲ್.ಸಿ ಪಿಯುಸಿ, ವೈದ್ಯಕೀಯ ಸೇರಿದಂತೆ ವಿವಿಧ ಕೋರ್ಸ್ ನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಿ, ಅಭಿನಂದಿಸಲಾಯಿತು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *