Breaking News

ಟೇಕ್ವಾಂಡೋ ಸ್ಪರ್ಧೆಯಲ್ಲಿ ಬಂಗಾರ ಪದಕ ವಿಜೇತ : ಧಾರವಾಡ ಕೀರ್ತಿಯನ್ನು ಹೆಚ್ಚಿಸಿದ ಮಿಲನ

ಧಾರವಾಡ:ಜಿಲ್ಲೆಯ ಸಿಂಗನಹಳ್ಳಿ ಗ್ರಾಮದ ಧಾರವಾಡ ಅಂತರರಾಷ್ಟ್ರೀಯ ಶಾಲೆಯ ಎಂಟನೇಯ ತರಗತಿ ವಿದ್ಯಾರ್ಥಿ ಮಿಲನ ಭಟ್ ಕಾಶಿಯಲ್ಲಿ ನಡೆದ ಕಾಶಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಚಾಲೆಂಜ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ಆತನು ಜಿಲ್ಲಾ ಮಟ್ಟದ ಟೇಕ್ವಾಂಡೋ ಕೆಡಿಟ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ನಂತರ ತುಮಕೂರಿನಲ್ಲಿ ನಡೆದ 38 ನೇ ರಾಜ್ಯ ಮಟ್ಟದ ಟೇಕ್ವಾಂಡೋ ಕೆಡಿಟ್ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತನ್ನ ಸತತ ಪರಿಶ್ರಮದಿಂದ ತರಬೇತಿದಾರರಾದ ಪರಪ್ಪ,ಅಂಜಲಿ ಹಾಗೂ ಆನಂದ ಇವರಿಂದ ತರಬೇತಿ ಪಡೆದು ಬ್ಯ್ಲಾಕ ಬೆಲ್ಟ್ ಪಡೆದಿದ್ದಾನೆ.

ಅವರು ಫುಜೈರಾ ಯುಎಇ ದುಬೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಓಪನ್ ಜೂನಿಯರ್ ಮತ್ತು ಕೆಡಿಟ್ ವಿಭಾಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮಿಲನ ಭಟ್ ಅವರನ್ನು ಅನುರಾಧ ಮೋಹನ್ ಕುಲಕರ್ಣಿ, ರಾಜೇಶ್ವರಿ ಕುಲಕರ್ಣಿ ರೇಣುಕಾ ಧನಂಜಯ, ಗಿರೀಶ್ ನಾಗಸಂಪಿಗೆ ರಕ್ಷಿತ ಇನ್ನಿತರರು ಅಭಿನಂದಿಸಿದ್ದಾರೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *