Breaking News

ಮುಂಜಾನೆ ವೇಳೆ ಮಂಡ್ಯದಲ್ಲಿ ಘೋರ ದುರಂತ : ಮಹಿಳೆ ಸಾವು , 40 ಜನ ಆಸ್ಪತ್ರೆಗೆ ದಾಖಲು


ಮಂಡ್ಯ : ಬೆಳ್ಳಂಬೆಳಗ್ಗೆ ಮನೆಯ ತಾರಸಿ ಕುಸಿದು ಬಿದ್ದು ಘೋರ ದುರಂತ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಇಂದು‌ ಮುಂಜಾನೆ ಮಾದೇಗೌಡ ನಿವಾಸದಲ್ಲಿ ನಡೆದಿದೆ.

ಗ್ರಾಮದ ಪುಟ್ಟಲಿಂಗಮ್ಮ(50) ಸಾವನ್ನಪ್ಪಿದ್ದು,
40 ಜನರು ಗಾಯಗೊಂಡಿದ್ದಾರೆ. ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು ಮಾದೇಗೌಡರ ತಾರಸಿಗೆ 100 ಕ್ಕೂ ಹೆಚ್ಚು ಜನರು ಏರಿದ್ದರು. ಈ ವೇಳೆ 90 ವರ್ಷದ ಹಳೆಯ ಕಟ್ಟಡ ಕುಸಿದಿದೆ.

10 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *