Breaking News

‌ರಕ್ತದಲ್ಲಿ ಪ್ರೇಯಸಿಗೆ ಪ್ರೇಮ ಪತ್ರ ಬರೆದು ಯುವಕ ಆತ್ಮಹತ್ಯೆ


ಚಿಕ್ಕಬಳ್ಳಾಪುರ : ರಕ್ತದಲ್ಲಿ ಪ್ರೇಯಸಿಗೆ ಪತ್ರ ಬರೆದು ಮದುವೆ ನಿಶ್ಚಯ ಆದ ಮೂರೇ ದಿನಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಯಲ್ಲಿ ನಡೆದಿದೆ.

ಪ್ರೇಮ ಪತ್ರದುದ್ದಕ್ಕೂ ಸ್ವಾರಿ , ಐ ಲವ್ ಯು ಸಾಲುಗಳೇ ಹೆಚ್ಚಾಗಿವೆ. ಶಿ ಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ನಿವಾಸಿ ಮುನಿಕೃಷ್ಣ ಎಂಬಾತ ವಿಷ ಕುಡಿದು ಸಾವಿಗೆ ಶರಣಾದ ಯುವಕ , ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ , ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ . ಮೂರು ದಿನಗಳ ಹಿಂದೆ ಮುನಿಕೃಷ್ಣಗೆ ಗುಂಡಿಬಂಡೆ ತಾಲೂಕಿನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು . ಆದರೆ , ನಿಶ್ಚಿತಾರ್ಥ ಆದ ಮೂರೇ ದಿನಕ್ಕೆ ಮುನಿಕೃಷ್ಣ ಸಾವಿನ ಮನೆ ಸೇರಿದ್ದಾನೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ಈ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ .

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *