Breaking News

ಸರಣಿ ಕಳ್ಳತನ : ಆಭರಣ ದೊಚಿಕೊಂಡು ಪರಾರಿ

ಧಾರವಾಡ: ನಗರದಲ್ಲಿ ನಿನ್ನೆ ತಡರಾತ್ರಿ ಕಳ್ಳತನ ನಡೆದಿದ್ದು . ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು , ಮೂರ್ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿ ಅಪಾರ ಪ್ರಮಾಣದ ನಗದು ಹಣ, ಚಿನ್ನ, ಬೆಳ್ಳಿಯ ಆಭರಣಗಳನ್ನು ದೊಚಿಕೊಂಡು ಹೋದ ಘಟನೆ ನಡೆದಿದೆ.

ಆಂಜನೇಯ ನಗರದ 4 ನೇ ಕ್ರಾಸ್‌ನಲ್ಲಿರುವ ಪ್ರಕಾಶ್ ದೊಡ್ಡಮನಿ ಎಂಬ ಸಿಆರ್‌ಪಿಎಫ್ ಪೊಲೀಸ್ ಮನೆಯಲ್ಲಿ ಮೊದಲು ಕಳ್ಳರು ಕಳ್ಳತನ ಮಾಡಿದ್ದು ಇವರ ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ , ಚಿನ್ನ ಸೇರಿದಂತೆ 60 ಸಾವಿರ ಹಣವನ್ನು ದೋಚಿಕೊಂಡು ಹೋಗಿದ್ದಾರೆ .

ಅದೇ ಕ್ರಾಸ್‌ನಲ್ಲಿರುವ ಶಿವನಾಗ ಆಲದಮರ ಎಂಬುವವರ ಮನೆಗೆ ಎಂಟ್ರಿ ಕೊಟ್ಟು ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ . ಮನೆಯಲ್ಲಿ ಏನೂ ಸಿಗದಿದ್ದರಿಂದ ಅಲ್ಲಿಂದ 8 ನೇ ಕ್ರಾಸ್‌ನಲ್ಲಿ ಬೀಗ ಹಾಕಿದ್ದ ರುದ್ರಪ್ಪ ಹನಜಿ ಅವರ ಮನೆಗೆ ಎಂಟ್ರಿ ಕೊಟ್ಟು ಅಲ್ಮೆರಾ ಒಡೆದು ಮನೆಯಲ್ಲಿನ 10 ಸಾವಿರ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *