ಮಂಗಳೂರು: ಕಳೆದ ಹಲವಾರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ
ಗಯಾಪದ ಕ್ಷೇತ್ರ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮವಾಗಿದೆ.
ಉಪ್ಪಿನಂಗಡಿ ದೇಗುಲದಲ್ಲಿ ನದಿಗಳ ಸಂಗಮವಾಗಿದ್ದು, ನೆರೆದ ಸಹಸ್ರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮವಾಗಿದ್ದು, ಸಂಗಮದ ಬಳಿಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು
ಗಂಗಾಪೂಜೆ ಬಳಿಕ ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ ಅಭಿಷೇಕ ಹಾಗೂ ಪೂಜೆ ವೈಭವದಿಂದ ಜರುಗಿತು.
ಬೆಳಿಗ್ಗೆ ಮಹಾಕಾಳಿ ದೇಗುಲದ ಎದುರು ಭಾಗದಿಂದ ನೇತ್ರಾವತಿ ನದಿ ನೀರು ಹಾಗೂ ಹಿಂದಿನ ಭಾಗದಿಂದ ಕುಮಾರಧಾರ ನದಿ ನೀರು ಹರಿದು ಬಂದು ಸುಗಮವಾಗಿದೆ.
ದಕ್ಷಿಣ ಕಾಶಿಯೆಂದೇ ಪರಿಚಿತವಾದ ಉಪ್ಪಿನಂಗಡಿ ಕ್ಷೇತ್ರದಲ್ಲಿ ಕಳೆದ ವರ್ಷ ಉಪ್ಪಿನಂಗಡಿಯಲ್ಲಿ ಎರಡು ಬಾರಿ ಸಂಗಮ ಆಗಿತ್ತು. ಕಳೆದ ವರ್ಷದ ಆ.14ರಂದು ಮೊದಲ ಸಂಗಮ ಆಗಿತ್ತು
ಕಳೆದ ಬಾರಿಯೂ ಎರಡು ಸಂಗಮ ಆಗಸ್ಟ್ ನಲ್ಲೇ ಆಗಿತ್ತು ಎಂಬುದು ವಿಶೇಷ.
bigtvnews | Hubli Dharwad News | Kannada News | Karnataka News Hubli News | News In Hubli | Local news





