ಮುಂಬೈ: ಬ್ಯಾಂಕಾಕ್ನಿಂದ ಮುಂಬೈಗೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಾಡೆಲ್ ಒಬ್ಬರನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಾಜಿ ʼಮಿಸಸ್ ಕೇರಳʼ ಸೌಂದರ್ಯ ಸ್ಪರ್ಧೆಯ ರನ್ನರ್ ಅಪ್, ಮಾಡೆಲ್ ಹರ್ಷಾ ಸನ್ನಿ(29) ಬಂಧಿತ ಆರೋಪಿ. ಈಕೆಯ ಲಗೇಜ್ನಿಂದ 11.82 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಪೊಲೀಸರು ವಶಪಡಿಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಸನ್ನಿ ಬ್ಯಾಂಕಾಕ್ನಿಂದ ಮುಂಬೈಗೆ ಬಂದಿಳಿದಿದ್ದಾಳೆ. ಅನುಮಾನದ ಹಿನ್ನೆಲೆ ಏರ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳು ಆಕೆಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಕೆಯ ಟ್ರಾಲಿ ಬ್ಯಾಗ್ನಲ್ಲಿ 12 ವ್ಯಾಕ್ಯೂಮ್-ಸೀಲ್ಡ್ ಪ್ಯಾಕೆಟ್ಗಳು ಕಂಡು ಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ ಆಕೆಯ ಬಳಿ ಹೈಡ್ರೋಪೋನಿಕ್ ಗಾಂಜಾ ಇರುವುದು ಪತ್ತೆಯಾಗಿದೆ. ಇದರ ಮೌಲ್ಯ 11.82 ಕೋಟಿ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ.ಬಳಿಕ NDPS ಕಾಯ್ದೆಯಡಿಯಲ್ಲಿ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

