Breaking News

ಟ್ರೆಡಿಂಗ್‌ಗೆ ಹೂಡಿಕೆ: ಮಹಿಳೆಗೆ 11.75ಲಕ್ಷ ರೂ. ಆನ್‌ಲೈನ್ ವಂಚನೆ

ಉಡುಪಿ: ಟ್ರೆಡಿಂಗ್ ಆಯಪ್‌ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್‌ಲೈನ್ ವಂಚನೆಗೆ ಒಳಗಾದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹನ ಎಂಬವರು ಟ್ರೆಡಿಂಗ್ ಬಗ್ಗೆ ತಿಳಿದುಕೊಳ್ಳಲು ಆಯಪ್‌ವೊಂದನ್ನು ಡೌನ್‌ಲೋಡ್ ಮಾಡಿದ್ದು, ಮುಂದೆ 15 ದಿನ ಗಳ ನಂತರ ಅಪರಿಚಿತ ಕರೆ ಮಾಡಿ, ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದನು. ಅದರಲ್ಲಿ ಲಿಂಕ್ ನ್ನು ಕಳುಹಿಸಿ ಕೆವೈಸಿ ಡಿಟೈಲ್ ಫಿಲ್ ಮಾಡುವಂತೆ ತಿಳಿಸಲಾಗಿತ್ತು. ನಂತರ ಟ್ರೆಡಿಂಗ್ ಬಗ್ಗೆ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಸಹನ ಮಾ.6ರಿಂದ ಮಾ.14ರವರೆಗೆ ಹಂತ ಹಂತವಾಗಿ ಒಟ್ಟು 11,75,000ರೂ. ಹಣವನ್ನು ವರ್ಗಾವಣೆ ಮಾಡಿದ್ದ ರೆನ್ನಲಾಗಿದೆ. ಆದರೆ ಆರೋಪಿಗಳು ಈವರೆಗೆ ವರ್ಗಾವಣೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ಸಹನ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *