ಧಾರವಾಡ: ಎರಡು ದಿನದ ಹಿಂದೆ ಜೆಜೆ ನಗರದಲ್ಲಿ ಚಂದ್ರು ಎಂಬ ಯುವಕನ ಕೊಲೆ ಯಾಗಿದ್ದು, ಕೊಲೆಯ ಭೀಕರತೆಯನ್ನು ಸಿಸಿಟಿವಿಯ ದೃಶ್ಯಗಳು ತೆರದಿಟ್ಟಿದ್ದೇವೆ. ಅತ್ಯಂತ ಹೀನಾಯವಾಗಿ ಚಂದ್ರು ಎಂಬ ಯುವಕನನ್ನು, ಮುಸ್ಲಿಂ ಯುವಕರು ಕೊಲೆ ಮಾಡಿರುವುದು ಗೊತ್ತಾಗುತ್ತಿದೆ. ಹಾಗಾಗಿ ಚಿಕ್ಕ ವಿಷಯಕ್ಕೆ ಕೊಲೆ ಮಾಡುವ ಮುಸ್ಲಿಂ ಯುವಕರ ಪ್ರವೃತ್ತಿಯನ್ನು ರಾಜ್ಯ ಪೊಲೀಸ್ ಇಲಾಖೆ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಗ್ರಹಿಸಿದ್ದಾರೆ.
ಬೆಂಗಳೂರಿನ ಜೆಜೆ ನಗರದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾಗಿರುವ ಯುವಕ ದಲಿತ ಎಂದು ಗೃಹ ಮಂತ್ರಿಗಳು ಉಲ್ಲೇಖ ಮಾಡಿದ್ದಾರೆ. ಮುಸ್ಲಿಂ ಯುವಕರು ಆತನನ್ನ ಕೊಲೆ ಮಾಡುವ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಆದರೆ ಯಾವ ಕಾರಣಕ್ಕೆ ಈ ಕೊಲೆ ಮಾಡಿದ್ದಾರೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.
ಆದರೆ ಉರ್ದು ಬರಲಿಲ್ಲ, ಕನ್ನಡ ಬರಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕು ಎಂದರು.
ಪೋಲಿಸ್ ಇಲಾಖೆ ಇಂತಹ ಘಟನೆಗಳನ್ನ ವ್ಯವಸ್ತಿತವಾಗಿ ಮುಚ್ಚಿಹಾಕಲು ಪ್ರಯತ್ನ ಮಾಡಬಾರದು. ಬೆಂಗಳೂರಿನಲ್ಲಿ ತಿಲಕ್ ನಗರ, ಸುಲ್ತಾನಪೂರ ,ಶಿವಾಜಿನಗರದಲ್ಲಿ ಹೋದರೆ ಉರ್ದು ಮಾತನಾಡುತ್ತಾರೆ. ಅಲ್ಲಿ ಪ್ರವೇಶ ಮಾಡುವವರು ಉರ್ದು ಭಾಷೆ ಮಾತನಾಡಲೇಕಬೇಕು ಎಂಬ ಪರಿಸ್ಥಿತಿ ತಂದೊಡಿದ್ದಾರೆ ಅಲ್ಲಿನ ನಿವಾಸಿಗಳು. ತಿಲಕ್ ನಗರದಲ್ಲಿ ರಾಮನ ಧನ ಸಂಗ್ರಹ ಸಮಯದಲ್ಲಿ ರಥದ ಮೆಲೆ ಅಟ‌್ಯಾಕ್ ಮಾಡಿದ್ದರು. ಉರ್ದು ಭಾಷೆ ಮಾತನಾಡಿಲ್ಲ ಎಂಬ ಕಾಣರಕ್ಕೆ ಈ ಕೊಲೆ ನಡೆದಿದ್ದರೆ. ಇದನ್ನು ಎಲ್ಲರೂ ಖಂಡಿಸಬೇಕು, ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಭಾಷೆ ಬಿಟ್ಟು, ಉರ್ದು ಭಾಷೆಗಾಗಿ ಕೊಲೆ ಮಾಡುವ ಮಟ್ಟಿಗೆ ಹೋಗುತ್ತಾರೆ ಅಂದರೆ ಅವರ ಮನಸ್ಥಿತಿ ಯಾವ ಮಟ್ಟಿಗೆ ಇದೆ ಎಂಬುವುದು ಎಲ್ಲರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಮುಸ್ಲಿಂ ಯುವಕರು ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿ, ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರ ವಿರುದ್ಧ ಸರ್ಕಾರ, ಗೃಹ ಇಲಾಖೆ ಹಾಗೂ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ತಾಲಿಬಾನಿ ಪ್ರಕ್ರಿಯೆಗಳು ನಡೆಯುತ್ತಿವೆ. ಹಾಗಾಗಿ ಮುಸ್ಲಿಂ ಯುವಕರು ಕೊಲೆ ಮಾಡುವ ಪ್ರವೃತಿಯ ವಿರುದ್ಧ ನಾವು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

