ಯುವತಿಯನ್ನು ಪೋಷಕರಿಗೆ ಒಪ್ಪಿಸುವಂತೆ ಹಿಂದೂ ಸಂಘಟನೆಗಳ ಆಗ್ರಹ
ಹಿಂದೂ ಹುಡುಗಿಯನ್ನು ಅನ್ಯ ಕೋಮಿನ ಹುಡುಗ ಅಪಹರಿಸಿದ್ದು, ದೂರು ನೀಡಿ ಐದು ದಿನಗಳಾದರೂ ಪೊಲೀಸರು ಆರೋಪಿ ವಿರುದ್ಧ ಕ್ರಮ ಜರುಗಿಸಿಲ್ಲವೆಂದು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಎದುರು ಬಜರಂಗದಳ, ವಿಶ್ವ ಹಿಂದು ಪರಿಷತ್, ಹುಡುಗಿ ಪೋಷಕರು ಧರಣಿ ನಡೆಸಿದರು.
ಇದು ಲವ್ ಜಿಹಾದ್ ಕೃತ್ಯ ಹುಡುಗನ ಕಡೆಯವರಿಗೆ ಪೊಲೀಸರು ಸಪೋರ್ಟ್ ಮಾಡುತ್ತಿದ್ದು, ಒಂದು ಗಂಟೆಯೊಳಗೆ ಹುಡುಗಿಯನ್ನು ಪೊಲೀಸರು ಪೋಷಕರಿಗೆ ಒಪ್ಪಿಸದೇ ಇದ್ದರೆ ಚೆನ್ನಮ್ಮ ವೃತ್ತ ಬಂದ್ ಮಾಡಿ ಹುಬ್ಬಳ್ಳಿಗೆ ಬೆಂಕಿ ಹಚ್ಚುತ್ತೇವೆ. ಪರಿಸ್ಥಿತಿ ಕೈ ಮೀರುವ ಮುನ್ನ ಪೊಲೀಸರು ಹುಡುಗಿಯನ್ನು ಪೋಷಕರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಡಿಸಿಪಿ ಬಾಗ್ಲಾ ಅವರು ಮಾತುಕತೆ ನಡೆಸಿ ಧರಣಿ ಹಿಂಪಡೆಯಲು ಮಾಡಿದ ಮನವಿಗೆ ಧರಣಿ ನಿರತರು ಒಪ್ಪಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

