Breaking News

ಹಸೆಮಣೆ ಏರ ಬೇಕಾದ ಪೋಲಿಸ್ ಸ್ಮಶಾನ ಸೇರಿದ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹುಬ್ಬಳ್ಳಿ : ವಿಧಿ ಯಾರ ಜೀವನದಲ್ಲಿ ಹೇಗೆ ಆಟವಾಡುತ್ತದೆ ಎಂಬುವುದು ಆ ಭಗವಂತನಿಗೆ ಮಾತ್ರ ಗೊತ್ತು. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಪೇದೆ ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದು , ಇದೇ ತಿಂಗಳ 24 ರಂದು ಅಕ್ಕನ ಮಗಳ ಜೊತೆ ಮದುವೆ ಫಿಕ್ಸ್ ಆಗಿರುವ ಮಾಹಿತಿ ಲಭ್ಯವಾಗಿದೆ .

ಪಂಡಿತ ಕಾಸರ್ ಎಂಬ ಪೇದೆ ಮೂಲತಃ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದವ . ಓರ್ವ ಅಣ್ಣ ಸೇರಿದಂತೆ ಮೂವರು ಅಕ್ಕ – ತಂಗಿಯರನ್ನ ಹೊಂದಿದ್ದರು . ಇತ್ತೀಚೆಗೆ ಗ್ರಾಮದಲ್ಲಿ ಹೊಸದೊಂದು ಮನೆಯನ್ನೂ ಕಟ್ಟಿಕೊಂಡಿದ್ದರು . ಆ ಮನೆಯ ಗೃಹ ಪ್ರವೇಶವೂ ಇದೇ ತಿಂಗಳ 21 ರಂದು ಮಾಡಲು ನಿರ್ಧರಿಸಲಾಗಿತ್ತು . ಪಂಡಿತ ಕಾಸರ್ ಗ್ರಾಮದಲ್ಲಿ ನಯ ವಿನಯದಿಂದ ನಡೆದುಕೊಳ್ಳುತ್ತಿದ್ದರು.ಯಾವುದೇ ಸಮಯದಲ್ಲಿಯೂ ತಾನು ಪೊಲೀಸ್ ಎನ್ನುವ ಮನೋಭಾವನೆಯನ್ನ ಹೊಂದಿರಲಿಲ್ಲ . ಆದರೆ ವಿಧಿಯಾಟಕ್ಕೆ ಈಗ ಬಲಿಯಾಗಿದ್ದು ಗ್ರಾಮದಲ್ಲಿ ನಿರವ ಮೌನ ಆಚರಿಸಿದೆ .

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *