ಸರ್ಕಾರದಲ್ಲಿ ನಾಯಕರು ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ನಷ್ಟವಾಗುತ್ತದೆ . ಹೋಗೋ ಬರೋ ಪಕ್ಷೇತರ ಶಾಸಕರನ್ನು ಪಕ್ಷಕ್ಕೆ ಸರ್ಪಡೆ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಗೌರವ ಇರುವುದಿಲ್ಲ ಎಂದು ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಚಿಂತಾಮಣಿ ನಗರದಲ್ಲಿ ಹೇಳಿಕೆ ನೀಡಿದರು. ಸಿಎಲ್ ಪಿ ಅಧ್ಯಕ್ಷರ ಬದಲಾವಣೆ ಬಗ್ಗೆ 22 ತಾರಿಖು ವೇಣುಗೋಪಾಲ್ ಮತ್ತು ಹಿರಿಯ ನಾಯಕರು ಕುರಿತು ಸಭೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ 21 ಹಾಗೂ ಜೆಡಿಎಸ್ ಪಕ್ಷಗಳ 7 ಅಭ್ಯರ್ಥಿಗಳ ಪೈಕಿ ಕೇವಲ ಒಂದೊಂದು ಸ್ಥಾನ ಪಡೆದಿರುವುದು ಇದರ ಬಗ್ಗೆ ಇದೇ ವೇಳೆ ಚರ್ಚೆ ಮಾಡಲಾಗುವುದು. ಪಕ್ಷದಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಗೌರವದಿಂದ ಸಮ್ಮಿಶ್ರ ಸರ್ಕಾರವನ್ನು ನಡೆಸಬೇಕೆಂದು ಸರ್ಕಾರಕ್ಕೆ ಕೆ ಹೆಚ್ ಮುನಿಯಪ್ಪ ಕವಿ ಹಿಂಡಿದರು. ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲಾ.ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಕೈ ಬಲ ಪಡಿಸಲು ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಇದೇ ವೇಳೆ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





