Breaking News

ನಿವೇಶನ ರಹಿತ ಸರ್ವೆ ಕುರಿತು ಎಂದು ಪ್ರತಿಭಟನೆ

ಹುಬ್ಬಳ್ಳಿ : ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಅವಳಿ ನಗರದಲ್ಲಿ ಆರ್ಥಿಕ ವಾಗಿ ದುರ್ಬಲ ವರ್ಗದ ನಿವೇಶನ ರಹಿತರನ್ನು ಸರ್ವೆ ಮೂಲಕ ಗುರುತಿಸು ಕರ್ಯಾ ಪ್ರಾರಂಭ ಮಾಡಿ ಎಂದು ಕರ್ನಾಟಕ ರಾಜ್ಯ ನಿವೇಶನ ರಹಿತ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.

ಅವಳಿ ನಗರದಲ್ಲಿ ಸುಮಾರು ವರ್ಷಗಳಿಂದ ಆರ್ಥಿಕ ವಾಗಿ ಹಿಂದುಳಿದ ದುರ್ಬಲ ವರ್ಗದವರನ್ನು ಸರ್ವೆ ಮುಖಾಂತರ ಗುರಿತಿಸುವ ಕಾರ್ಯ ಅಗಿಲ್ಲ. ಆದ ಕಾರಣ ಹೋರಾಟ ಸಮಿತಿಯಿಂದ ಈ ಹಿಂದೆ ಆಯುಕ್ತರಿಗೆ ಹಾಗೂ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೆವೆ. ಈ ಸರ್ವೆ ಮಾಡಿ ನಿವೇಶನರಹಿತರನ್ನು ಗುರುತಿಸಿ ಅವರಿಗೆ ಪರಿಚಯ ನಿವೇಶನ ಇಲ್ಲ ಎಂಬುದನ್ನು ಗುರಿತಿಸುವ ಪತ್ರ ಅಥವಾ ಕಾರ್ಡನ್ನು ಕೋಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು. ಸರ್ವೇ ಮಾಡುವದರಿಂದ ಇಂತಿಷ್ಟು ಜನರಿಗೆ ನಿವೇಶನಗಳು ಇಲ್ಲ ಎಂಬ ಸ್ಪಷ್ಟ ಮಾಹಿತಿ ಸಿಗುತ್ತದೆ, ಈ ಅಂಕಿ ಅಂಶಗಳನ್ನು ಸರ್ಕಾರಕ್ಕು ಕೋಡಬಹುದು ಎಂದು ಪ್ರತಿಭಟನೆ ಕಾರು ಗೋಷಣೆ ಕೂಗಿದರು.

ಈ ಒಂದು ತಿಂಗಳಲ್ಲಿ ಮಹಾನಗರ ಪಾಲಿಕೆ ಸರ್ವೇ ಕಾರ್ಯವನ್ನು ಪ್ರಾಂಭಿಸದಿದ್ದರೆ, ನಾವೇ ಲಿಖಿತ ರೂಪದಲ್ಲಿ ನಾವು ವಾಸಿಸುವ ಸ್ವ ವಿಳಾಸವನ್ನು ತಂದು ಮಹಾನಗರ ಪಾಲಿಕೆಗೆ ಕೋಡುತ್ತೆವೆ, ಇದರಿಂದ ಗುರುತಿನ ಕಾರ್ಡ ಕೋಡಬೆಕಾಗುತ್ತದೆ ಎಂದು ಪ್ರತಿಭಟನೆ ಕಾರರು ಆಕ್ರೋಶ ವ್ಯಕ್ತಪಡಿಸಿದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *