Breaking News

ಮಳೆ ಆಗಮನದಿಂದ ಹನುಮಾನ ದೇವರಿಗೆ ವಿಶೇಷ ಪೂಜೆ.

ಹುಬ್ಬಳ್ಳಿ:- ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆಗಮನದ ಹಿನ್ನೆಲೆಯಲ್ಲಿ ತಾಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿಗಳು ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪರುವ(ಅಂಬಲಿ )ಪ್ರಸಾದ ನೀಡಿದರು.ಜಿಲ್ಲೆಯಲ್ಲಿ ಮುಂಗಾರು ಮಳೆ ಆಗದ ಕಾರಣ ಕಳೆದ ವಾರ ಕುಸುಗಲ್ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೀಗ ಮಳೆ ಆರಂಭಗೊಂಡಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಿದೆ. ಈ ಕಾರಣದಿಂದಾಗಿ ಗ್ರಾಮದ ಜನರೆಲ್ಲಾ ಸೇರಿಕೊಂಡು ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪರ್ವ ಮಾಡುವ ಮೂಲಕ ಗ್ರಾಮದ ಜನರಿಗೆ ಪ್ರಸಾದ ಹಂಚಿದರು. ಇದೇ ಸಂದರ್ಭದಲ್ಲಿ ,ಚನ್ನಪ್ಪ ಮೇಗೆರಿ,ರಂಗಪ್ಪ ಬ್ಯಾಹಟ್ಟಿ,ಮಂಜುನಾಥ ನಾಯ್ಕರ್,ಖಾದೀರಸಾಬ ಮುಲ್ಲಾನವರ,ಹಜರೇಸಾಬ ನದಾಪ್, ಅಣ್ಣಯ್ಯ ಅಜ್ಜಾರ,ಪ್ರಭು ಬ್ಯಾಹಟ್ಟಿ,ಹಾಗೂ ಯುವಕರು ಭಾಗಿಯಾಗಿದ್ದರು.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *