ಧಾರವಾಡ: ಶನಿವಾರ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ನಬೀಸಾಬ್ ಗೌಸುಸಾಬ್ ಕಿಲ್ಲೇದಾರ, ಮೆಹಬೂಬ್‌ಸಾಬ್ ಮುಜಾವರ್, ಶರೀಫ್ ತಡಕೋಡ ಇವರ ಅಂಗಡಿಗಳನ್ನು 8ರಿಂದ 10 ಜನರಿದ್ದ ಗುಂಪು ದ್ವಂಸಗೊಳಿಸಿತ್ತು. ಮುಸ್ಲಿಮರಿಗೆ ಸೇರಿದ ಅಂಗಡಿಗಳ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಲಾರಪ್ಪ ಗುಡ್ಡಪ್ಪನವರ (27), ಮಹಾನಿಂಗ ಐಗಳಿ (26), ಚಿದಾನಂದ ಕಲಾಲ (25), ಕುಮಾರ ಕಟ್ಟಿಮನಿ (26) ಎಂಬುವವರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

