ತ್ರಿಶೂರ್(ಕೇರಳ): ಯುವಕನೋರ್ವ ತನ್ನ ತಂದೆ-ತಾಯಿಯನ್ನು ನಡು ರಸ್ತೆಯಲ್ಲೇ ಕೊಂದಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
ಮೃತರನ್ನು ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಎಂದು ಗುರುತಿಸಲಾಗಿದೆ. ಆರೋಪಿ ಅನೀಶ್ (30) ತಲೆಮರೆಸಿಕೊಂಡಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಕುಟ್ಟನ್ ಹಾಗೂ ಚಂದ್ರಿಕಾ ರಸ್ತೆಯಲ್ಲಿ ಮನೆಯ ಮುಂದಿನ ಹುಲ್ಲು ಕಟಾವು ಮಾಡುತ್ತಿದ್ದಾಗ ಅನೀಶ್ ಚಾಕು ಹಿಡಿದು ಬಂದು, ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ತಂದೆ ಕರೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

