ನಾನು ಯುವತಿಯೊಬ್ಬಳನ್ನು ಪ್ರಿತಿಸುತ್ತಿದ್ದೆ. ಬಹಳ ಸಲುಗೆಯಿಂದಿದ್ದು, ಅವಳ ಜೊತೆ ಸಂಬಂಧ ಹೊಂದಿದ್ದೆ. ಎರಡು ತಿಂಗಳೀಚೆಗೆ ನನಗೆ ಅವಳು ‘ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಮಧ್ಯೆ ಏನೆಲ್ಲ ನಡೆದಿದೆ ಮರೆತು ಬಿಡು ಎಂದು ಹೇಳುತ್ತಿದ್ದಾಳೆ’. ನನಗೆ ಮರೆಯಲು ಆಗುತ್ತಿಲ್ಲ. ನಾನು ಬಹಳ ಡಿಪ್ರೆಶನ್‌ಗೆ ಒಳಗಾಗಿದ್ದೇನೆ, ನನಗೆ ಸಹಾಯ ಮಾಡು. ನನಗೆ ನೀನೇ ನ್ಯಾಯ ಕೊಡಿಸು ಎಂದು ಪ್ರಥಮೇಶ ತನ್ನ ಸಹೋದರಿ ವೈಷ್ಣವಿಗೆ ವಾಟ್ಸ್‌ಆಯಪ್‌ನಲ್ಲಿ ಮೆಸೇಜ್ ಮಾಡಿದ್ದ. ನಂತರ ನಾವು ಅವನ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು’ ಎಂದು ಪ್ರಥಮೇಶ ತಂದೆ ಸಿದ್ಧರಾಜ ದೂರಿನಲ್ಲಿ ತಿಳಿಸಿದ್ದಾರೆ.ನೀಟ್ ಕೋಚಿಂಗ್‌ಗೆ ತೆರಳುವುದಾಗಿ ಹೇಳಿ ಮನೆಯಿಂದ ಹೋಗಿದ್ದ ವಿದ್ಯಾರ್ಥಿ ಕುರಿಕೋಟಾ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ. ಶನಿವಾರ ಸೇತುವೆ ಕೆಳಗೆ ನೀರಿನಲ್ಲಿ ಶನಿವಾರ ಬೆಳಿಗ್ಗೆ ಶವಪತ್ತೆಯಾಗಿದೆ. ಪ್ರೀತಿಸಿದ್ದ ಹುಡುಗಿ ಕೈಕೊಟ್ಟ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
