Breaking News

ಬಿಜೆಪಿ ವಿಕೆಟ್ ಪತನ : ಈಶ್ವರಪ್ಪ ರಾಜೀನಾಮೆ ಘೋಷಣೆ

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್​ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ 3 ದಿನ ಮಾತಾಡಲ್ಲ ಎಂದಿದ್ದ ಕೆ.ಎಸ್​ ಈಶ್ವರಪ್ಪ, ದಿಢೀರ್​ ಸುದ್ದಿಗೋಷ್ಠಿ ಕರೆದು ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ನಾಳೆಯೇ ರಾಜೀನಾಮೆ ನೀಡೋದಾಗಿ ಘೋಷಿಸಿದ್ದಾರೆ. ನಾಳೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರಕ್ಕೆ ಇರಿಸುಮುರಿಸು ಆಗಬಾರದು. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವೆ ಎಂದ್ರು  ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ. ಸಮಗ್ರ ತನಿಖೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ತಾಯಿ ಚೌಡೇಶ್ವರಿ ನಿರ್ದೋಷಿಯಾಗಿ ಮಾಡುತ್ತಾಳೆಂದು ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. 

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *