ಭಾರತದ ಮೂರನೆಯ ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು ಅಹಮದಾಬಾದ್ ಇಂದ ಮುಂಬೈಗೆ ತನ್ನ ಮೊದಲ ಪ್ರಯಾಣವನ್ನು 313 ಪ್ರಯಾಣಿಕರನ್ನು ಹೊತ್ತು ಸಂಚರಿಸಿದೆ. 492 ಕಿ.ಮೀ ದೂರದ ಈ ಪ್ರಯಾಣವನ್ನ 5 ಗಂಟೆ 30 ನಿಮಿಷಗಳಲ್ಲಿ ಮುಗಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೆನ್ನೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ರೈಲಿನಲ್ಲಿದ್ದ ಪ್ರಯಾಣಿಕರು ವಂದೇ ಮಾತರಂ ಘೋಷಣೆಯನ್ನು ಕೂಗುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು. ಮೊದಲ ವಂದೇ ಭಾರತ್ ರೈಲು ದೆಹಲಿ ಇಂದ ವಾರಣಾಸಿ ಹಾಗೂ ಎರಡನೆಯ ರೈಲು ದೆಹಲಿಯಿಂದ ಶ್ರೀ ವೈ಼ಷ್ಣೋದೇವಿ ಕಾತ್ರಕ್ಕೆ ಸಂಪರ್ಕ ಕಲ್ಪಿಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

