ಹುಬ್ಬಳ್ಳಿ: ವಿಶ್ವದಾದ್ಯಂತ ಬಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್ – 2 ಚಿತ್ರ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಎರಡನೇ ದಿನವಾದ ಇಂದು ಕೂಡಾ ಕೆಜಿಎಫ್ ಚಾಪ್ಟರ್-2 ಹೌಸಪುಲ್ ಪ್ರದರ್ಶನ ಕಾಣುತ್ತಿದೆ.
ಈಗಾಗಲೇ ಕೆಜಿಎಫ್ ಚಾಪ್ಟರ್- 1 ಗೆ ದೊಡ್ಡಮಟ್ಟದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿದ್ದು. ಅದರಂತೆ ಕೆಜಿಎಫ್ ಚಾಪ್ಟರ್-2 ಗೆ ಸಖತ್ ರೆಸ್ಪಾನ್ಸ್ ದೊರೆತಿದೆ. ಪ್ರಶಾಂತ ನೀಲ್ ನಿರ್ದೇಶನಕ್ಕೆ ಜನರು ಸಲಾಂ ಎಂದಿದ್ದಾರೆ.
ಹುಬ್ಬಳ್ಳಿಯ ಶೃಂಗಾರ, ಅಪ್ಸರಾ, ಸುಧಾ, ಪಿವಿಆರ್ ಗಳಲ್ಲಿ ಬೆಳಗ್ಗೆಯಿಂದಲೇ ಚಿತ್ರ ಪ್ರದರ್ಶನಗೊಂಡಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಹೌಸಫುಲ್ ಆಗಿದೆ. ಅದರಲ್ಲೂ ಸುಧಾ ಮತ್ತು ಅಪ್ಸರ್ ಚಿತ್ರಮಂದಿರಗಳ ಎದುರು ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಅಲ್ಲದೇ ಕಟೌಟ್ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ್ ಮಾಡಿ, ಪಟಾಕಿ ಸಿಡಿಸಿ, ಯಶ್ ಪರ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು. ಎಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

