Breaking News

ಪುನರ್ವಸತಿ ಕೇಂದ್ರದ ಮಾಲಿಕನ ಕೊಲೆ,ಆತನ ವಾಹನದಲ್ಲೇ ಆರೋಪಿಗಳು ಪರಾರಿ!

ಬೆಂಗಳೂರು ಚಂದ್ರಾಲೇಔಟ್‌ನ ನ್ಯೂ ಲೈಫ್‌ ರಿಹ್ಯಾಬ್‌ ಸೆಂಟರ್‌ನ ಮಾಲಿಕ ಶಿವಲಿಂಗಯ್ಯ (60) ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಿತಿನ್‌, ಕಾರ್ತಿಕ್‌, ಸೋಹೆಲ್‌ ಪಾಷ ಸೇರಿ ಹಲವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನಿತಿನ್‌ ಈ ಹಿಂದೆ ರಿಹ್ಯಾಬ್‌ ಸೆಂಟರ್‌ನಲ್ಲಿ ರೋಗಿಯಾಗಿದ್ದು, ಬಳಿಕ ಅದರ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ಜಗಳದ ವೇಳೆ ಆರೋಪಿಗಳು ಶಿವಲಿಂಗಯ್ಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಅವರ ಕಾರು ಹಾಗೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಚಂದ್ರಾಲೇಔಟ್‌ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *