ಮಂಗಳೂರಿನಲ್ಲಿ ಮಾದಕವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಉರ್ವ ಹಾಗೂ ಉಳ್ಳಾಲ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಡಿಕಲ್ ಫಲ್ಗುಣಿ ನಗರದ ಪಂಪ್‌ಹೌಸ್ ಬಳಿ ಗಾಂಜಾ ಮಾರಾಟಕ್ಕೆ ಬಂದಿದ್ದ ಕೇರಳದ ಶಾಯಿನ್ ಸಿ. (26)ನನ್ನು ಬಂಧಿಸಿ 39 ಗ್ರಾಂ ಗಾಂಜಾ, ನಗದು, ಮೊಬೈಲ್ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಉಳ್ಳಾಲ ಮುಕ್ಕಚೇರಿಯ ಸೀ ಗ್ರೌಂಡ್ ಬಳಿ ಎಂಡಿಎಂಎ ಮಾರಾಟಕ್ಕೆ ಬಂದಿದ್ದ ನಿಜಾಮುದ್ದೀನ್ ಫೈರೋಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹50 ಸಾವಿರ ಮೌಲ್ಯದ 5.08 ಗ್ರಾಂ ಎಂಡಿಎಂಎ ಹಾಗೂ ₹10 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ನವಾಜ್ ಮುಡಿಪು ಎಂಬಾತನ ಸೂಚನೆಯಂತೆ ಎಂಡಿಎಂಎ ತಂದಿರುವುದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಇಬ್ಬರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

