Breaking News

ಶ್ರೀ ಹನುಮ ಜಯಂತಿ ಸಂಭ್ರಮ: ನುಗ್ಗಿಕೇರಿ ಶ್ರೀ ಅಂಜನೇಯ‌ ದೇವಸ್ಥಾನಕ್ಕೆ ಹರಿದು ಭಕ್ತರ ದಂಡು

ಧಾರವಾಡ: ಶ್ರೀ ರಾಮನ ಭಂಟ ಎಂದೇ ಖ್ಯಾತಿ ಪಡೆದುಕೊಂಡು ಅಪಾರ ಭಕ್ತರನ್ನು ಹೊಂದಿರುವ ಶ್ರೀ ಹನುಮ ಜಯಂತಿಯನ್ನು ಪೇಡಾ ನಗರಿ ಧಾರವಾಡದಲ್ಲಿ ಹನುಮ‌ ಭಕ್ತರು ಶ್ರದ್ಧಾ ಭಕ್ತಿಯಿಂದ ಹನುಮ‌ ಜಯಂತಿಯನ್ನು ಆಚರಣೆ ಮಾಡಿದರು. ನಗರದಾದ್ಯಂತ ಹನುಮ ಜಯಂತಿ ಸಂಭ್ರಮ ಕಳೆಗಟ್ಟಿದ್ದು, ನಗ್ಗುಕೇರಿ ಶ್ರೀ ಅಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಬೀರು ಬೀಸಿಲಿನ ನಡುವೆಯು ಭಕ್ತರು ಕುಟುಂಬ ಸಮೇತವಾಗಿ ಶ್ರೀಅಂಜನೇಯ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ನಗರದ ಹೊರವಲಯದ ಧಾರವಾಡ ಕಲಘಟಗಿ ರಸ್ತೆಯಲ್ಲಿರುವ ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನಕ್ಕೆ ಹನುಮ ಜಯಂತಿ ಹಿನ್ನೆಲೆಯಲ್ಲಿ, ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತದೆ. ಇಂದು‌ ಮುಂಜಾನೆ ಶ್ರೀ ನುಗ್ಗಿಕೇರಿ ಅಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿಯ ವತಿಯಿಂದ ಮಹಾ ಮಂಗಳಾರತಿ, ವಿವಿಧ ಅಭಿಷೇಕಗಳು ಜರುಗಿದ್ದು, ಮಧ್ಯಾಹ್ನ 11.45 ರ ಸುಮಾರಿಗೆ ರಥೋತ್ಸವ ಕಾರ್ಯಕ್ರಮ ಜರುಗಿತು. ಈ ರಥೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ರಥವಮ್ನು ಎಳೆಯುವುದರ ಮೂಲಕ ಅಂಜನೇಯನ ಕೃಪೆಗೆ ಪಾತ್ರರಾದರು.

ದೇವಸ್ಥಾನದ ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ, ಡ್ರೋಣ್ ಹಾರಿಸಿ ಬಂದೋಬಸ್ತ ಪರಿಶೀಲನೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹಿಂದೂ ದೇವಸ್ಥಾನಗಳ ಬಳಿಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ನುಗ್ಗಿಕೇರಿ ದೇವಸ್ಥಾನ ಬಳಿಯಲ್ಲಿ ದೊಡ್ಡದೊಂದು ಹೈಡ್ರಾಮ ನಡೆದು, ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ರಸ್ತೆಗೆ ಚೆಲ್ಲಿ ಹಿಂದೂ ಬೆಂಬಲಿತರು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯ ಬಳಿಕ ರಾಜ್ಯ ಮಟ್ಟದಲ್ಲಿ ನುಗ್ಗಿಕೇರಿ ದೇವಸ್ಥಾನ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ನಂತರ ದೇವಸ್ಥಾನ ಟ್ರಸ್ಟ್ ಕಮಿಟಿಯು ಹಿಂದೂ ಮುಸ್ಲಿಂ ವ್ಯಾಪಾರಿಗಳನ್ನು ದೇವಸ್ಥಾನ ಆವರಣದಿಂದ ಇನ್ನೂರು ಮೀಟರ್‌ನಷ್ಟು ಹೊರಗಡೆ ಕಳಹಿಸಿ ವ್ಯಾಪಾರ ಮಾಡುವಂತೆ ಸೂಚಿಸುದರು. ಈಗ ಶ್ರೀ ಹನುಮ ಜಯಂತಿ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ತರಹದ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ, ದೇವಸ್ಥಾನ ಬಳಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ಎರಡು ಪೊಲೀಸ್ ಬಸ್, ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಡ್ರೋಣ್ ಬಳಸಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿದೆ.

ಖಾಲಿ ಹೊಡೆಯುತ್ತಿವೆ ಹಳೇ ಅಂಗಡಿಗಳು.

ಇನ್ನೂ ದೇವಸ್ಥಾನ ಬಳಿಯಲ್ಲಿ ಕೆಕವು ದಿನಗಳ ಹಿಂದೆಯಷ್ಟೇ ಶ್ರೀ ರಾಮ ಸೇನೆಯ ಕಾರ್ಯಕರ್ತರು ಎಂದು ಹೇಳಲಾದ ಕೆಲವರು ಕಲ್ಲಂಗಡಿ ಒಡೆದು ಹಾಕಿದ್ದ ಕಾರಣ, ಮತ್ತೆ ಯಾವುದೇ ಅಹಿತಕರ ಘಟನೆಯ ನಡೆಯಬಾರದು ಎಂದು ದೇವಸ್ಥಾನ ಟ್ರಸ್ಟ್ ಕಮಿಟಿಯು ಒಂದು ನಿರ್ಣಯವನ್ನು ತೆಗೆದುಕೊಂಡಿತ್ತು. ದೇವಸ್ಥಾನದ ಆವರಣದಲ್ಕಿ ಯಾರಿಗೂ ವ್ಯಾಪಾರ ಮಾಡಲು ಅವಕಾಶವಿಲ್ಲ, ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಂಡು ದೇವಸ್ಥಾನ ಬರುವ ಮಾರ್ಗದಲ್ಲಿ ವ್ಯಾಪಾರ ನಡೆಸಬೇಕು ಎಂದು ಹೇಳಿತ್ತು. ಇದರಿಂದ ಈಗ ದೇವಸ್ಥಾನದಲ್ಲಿದ್ದ ಹಳೇ ಅಂಗಡಿಗಳು ಖಾಲಿ ಹೊಡೆಯುತ್ತಿದ್ದ, ವ್ಯಾಪಾರಸ್ಥರ ರಸ್ತೆ ಬದಿಯಲ್ಲಿ ತಮ್ಮ ವ್ಯಾಪಾರ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಹಲವು ದಶಕಗಳಿಂದ ಶಾಂತಿಗೆ ಹೆಸರಾಗಿದ್ದ ನುಗ್ಗಿಕೇರಿ ಶ್ರೀ ಅಂಜನೇಯ ದೇವಸ್ಥಾನದಲ್ಲಿ, ಇತ್ತೀಚೆಗೆ ವಿವಾದ ಸೃಷ್ಟಿಯಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ದೇವಸ್ಥಾನದಲ್ಲಿ ಶಾಂತಿಯುವಾಗಿ ಶ್ರೀ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಭಕ್ತರು ಕೂಡಾ ಬಿರು ಬೀಸಿಲನ್ನು ಲೆಕ್ಕಸದೇ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಅಂಜನೇಯನ ದರ್ಶನ ಪಡೆದುಕೊಂಡು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.

Share News

About admin

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *