ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯು ಧಾರ್ಮಿಕ ಆಚರಣೆಗೆ ಹೆಸರಾಗಿದೆ. ಯಾವುದೇ ಆಚರಣೆ ಬಂದರೂ ವಿಭಿನ್ನವಾಗಿ, ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುವುದು ನಮ್ಮ ಹುಬ್ಬಳ್ಳಿ ಜನರ ಸಂಪ್ರದಾಯವಾಗಿದ್ದು, ಹನುಮಾನ್ ಜಯಂತಿಯನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣ ಆಚರಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪೂರದ ನಾಗಶೆಟ್ಟಿಕೊಪ್ಪ, ಬಮ್ಮಾಪೂರ ಓಣಿ ಸೇರಿದಂತೆ ಬಹುತೇಕ ಕಡೆಯಲ್ಲಿ ತಾಯದಿಂದರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಹನುಮಾನ್ ಜಯಂತಿಯನ್ನು ಆಚರಣೆ ಮಾಡಿದ್ದಾರೆ. ತೊಟ್ಟಿಲು ತೂಗುವ ಮೂಲಕ ಜೋಗುಳ ಹಾಡನ್ನು ಹಾಡಿ ಸಾಂಪ್ರದಾಯಿಕ ಹನುಮಾನ್ ಜಯಂತಿ ಆಚರಣೆ ಮಾಡಿದ್ದು, ಹುಬ್ಬಳ್ಳಿಯ ಆಚರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಬೆಳ್ಳಂಬೆಳಿಗ್ಗೆ ಹನುಮಂತ ದೇವರಿಗೆ ವಿಶೇಷ ಅಲಂಕಾರಿಕ ಪೂಜೆ ಪುನಸ್ಕಾರ ನೆರವೇರಿಸಿದ ಮಹಿಳೆಯರು ಉಡಿ ತುಂಬಿಕೊಂಡು ಹನುಮಾನ್ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ತೂಗಿರೇ ಹನುಮಾನ್… ತೂಗಿರೇ ವಾಯುಪುತ್ರನ.. ಎಂದು ಜೋಗುಳ ಹಾಡುವ ಮೂಲಕ ಆಚರಣೆ ಮಾಡಿದ್ದು, ನಿಜಕ್ಕೂ ವಿಶೇಷವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

