ಬೆಂಗಳೂರು: ಕರ್ನಾಟಕ ಎಂದು ಹೆಸರಾಗಿ ಇಂದಿಗೆ 50 ವರ್ಷವಾಗಿದೆ. ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆ ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸೋಣ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಈ ಬಾರಿ 68 ಮಂದಿಗೆ ನೀಡಲಾಗಿದೆ. ಇದರ ಜತೆಗೆ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಇವರಲ್ಲಿ ನೂರು ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಿರುವುದು ವಿಶೇಷವಾಗಿದೆ.ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗೆ ಎರಡು ಎಕರೆ ಸ್ವಂತ ಜಾಗ ನೀಡಿದ್ದ ಹುಚ್ಚಮ್ಮ, ರಾಮನಗರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡಗೆ ಹಾಗೂ ಇಸ್ರೋ ಸಂಸ್ಥೆಯ ಮುಖ್ಯಸ್ಥರಾದ ಸೋಮನಾಥ್ ಅವರಿಗೂ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರಲ್ಲಿ 13 ಮಹಿಳೆಯರು, ಒಬ್ಬರು ಮಂಗಳಮುಖಿಗೆ ಸಹ ಪ್ರಶಸ್ತಿ ದೊರೆತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





