ಹುಬ್ಬಳ್ಳಿ: ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಇದ್ದಾರೆ. ನ್ಯಾಯಾಂಗ ಇದೆ. ತನಿಖೆಗೂ ಮೊದಲು ಅಮಾಯಕರು ಅಂತ ಹೇಗೆ ಹೇಳ್ತೀರಾ ಎಂದು ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಇದ್ದಾರೆ. ನ್ಯಾಯಾಂಗ ಇದೆ. ತನಿಖೆಗೂ ಮೊದಲು ಅಮಾಯಕರು ಅಂತ ಹೇಗೆ ಹೇಳ್ತೀರಾ ಎಂದು ತಿರುಗೇಟು ನೀಡಿದರು. ಎಡಿಜಿಪಿ, ನಿಷ್ಪಪಕ್ಷಪಾತ ತನಿಖೆ ನಡೆಸುತ್ತಿದೆ. ಅಮಾಯಕರಿದ್ದರೆ ಅವರೇ ಬಿಡುತ್ತೇವೆ ಎಂದು ಹೇಳಿದ್ದಾರೆ. ಘಟನೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆ ಇದ್ದರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

