Breaking News

ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ 146 ಜನರನ್ನ ಅರೆಸ್ಟ್ ಮಾಡಲಾಗಿದೆ : ಲಾಬೂರಾಮ್


ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ ಇಲ್ಲಿಯವರೆಗೆ 146 ಜನರನ್ನ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಲಾಬೂರಾಮ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಯಾರೇ ಇರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆವೆ. ಕೆಲವೊಂದಿಷ್ಟು ಜನ ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ.ರಿಪೇಟೆಡ್ ಅಫಂಡರ್ ಗಳು ಕೂಡಾ ಇದ್ದಾರೆ. ಅವರ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೆವೆ. ವಸೀಂ ಪಠಾಣ್ ವಿಚಾರಣೆ ನಡೆಯುತ್ತಿದೆ.
ಅವರ ಹಿಂದೆ ಮುಂದೆ ಯಾರೇ ಇರಲಿ ನಾವು ಬಿಡವ ಮಾತೇ ಇಲ್ಲ. ಯಾವುದೇ ಸಂಘಟನೆ,ವ್ಯಕ್ತಿ ಇದ್ರು ಬಿಡಲ್ಲ. ಸಧ್ಯ ಪ್ರಕರಣ ತನೀಖೆ ನಡೆಯುತ್ತಿದೆ.
ಹೀಗಾಗೇ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ತನಿಖೆಯ ಮುಗಿದ ನಂತರ ಎಲ್ಲ ಮಾಹಿತಿ ಗೊತ್ತಾಗುತ್ತದೆ ಎಂದರು.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *