ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕಟ್ಟೆ ಕೆರೆಯಲ್ಲಿ ಬೆಟ್ಟಹಳ್ಳಿ ಗ್ರಾಮದ ವಿಜಯ್ ಸಾಲಭಾಧೆ ತಾಳಲಾರದೆ ಸೋಮವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ಸೋಮವಾರದಿಂದ ಅಗ್ನಿ ಶಾಮಕದಳದವರು ಶವ ಪತ್ತೆಗಾಗಿ ಪ್ರಯತ್ನಿಸಿದ್ದರು, ಶವ ಸಿಕ್ಕಿರಲಿಲ್ಲ ಮಂಗಳವಾರ ಬೆಳಗ್ಗೆ ಕಲ್ಕಟ್ಟೆ ಕೆರೆಯಲ್ಲಿ ವಿಜಯ್ ಶವ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಜಯ್ ಗೆ 25 ಲಕ್ಷ ರೂಪಾಯಿಗಳ ಸಾಲ ಇತ್ತೆಂದು ಹೇಳಲಾಗಿದ್ದು, ಈ ಬಗ್ಗೆ ಸಾಲಗಾರರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಬಳಲಿಹೋಗಿದ್ದ ವಿಜಯ್ ಸಾಲ ತೀರಿಸಲಾಗದೆ ಸಾವಿನ ಹಾದಿ ಹಿಡಿದರು ಎನ್ನಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

