Breaking News

ಜೋಗ ಜಲಪಾತ ಪ್ರವೇಶ ಶುಲ್ಕ ಹೆಚ್ಚಳ: ಪ್ರವಾಸಿಗರ ಆಕ್ಷೇಪ

ತಾಳಗುಪ್ಪ : ಪ್ರಕೃತಿಯ ರಮ್ಯ ತಾಣ ಜೋಗ ಜಲಪಾತ ವೀಕ್ಷಣೆ ಪ್ರವೇಶ ಶುಲ್ಕ ಈಗ ಮತ್ತಷ್ಟು ದುಬಾರಿಯಾಗಿದೆ. ಸುಮಾರು 183.7 ಕೋಟಿ ರು.ಗಳ ವೆಚ್ಚದಲ್ಲಿ ಜಲಪಾತದ ಆವರಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಹೊರಟಿರುವ ಜೋಗ ನಿರ್ವಹಣಾ ಪ್ರಾಧಿಕಾರವು, ಮೂಲ ಸೌಕರ್ಯ ಪೂರ್ಣ ರೂಪುಗೊಳ್ಳುವ ಮೊದಲೇ ಹಿಂದಿದ್ದ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ.ಇದು ಈಗ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪಕ್ಕೆ ಕಾರಣವಾಗಿದೆ.
ಜೋಗ ಜಲಪಾತದ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಕಾಮಗಾರಿಗಳು ಪೂರ್ಣಗೊಳ್ಳಲು ವರ್ಷಕ್ಕೂ ಅಧಿಕ ಸಮಯ ತಗಲುತ್ತದೆ ಅಷ್ಟರಲ್ಲಿಯೇ ಪ್ರಾಧಿಕಾರ ಪ್ರವೇಶ ಶುಲ್ಕವನ್ನು ಅವೈಜ್ಞಾನಿಕವಾಗಿ ಮೂರು ಪಟ್ಟು ಹೆಚ್ಚಿಸಿರುವುದು ಪ್ರವಾಸಿಗರ ಕಣ್ಣು ಕೆಂಪಾಗಿಸಿದೆ.
ಜೋಗ ಜಲಪಾತ ವೀಕ್ಷಣೆಗೆ ಈ ಹಿಂದೆ ಬಸ್ಸೊಂದಕ್ಕೆ 150 ರು. ಪ್ರವೇಶ ಶುಲ್ಕ ಇತ್ತು. ಈಗ ಇದನ್ನು 200 ರು.ಗೆ ಹೆಚ್ಚಿಸಲಾಗಿದೆ. ಟಿಟಿ, ಮಿನಿ ಬಸ್‌ ದರ 100ರಿಂದ 150ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ಆಟೋರಿಕ್ಷಾ 30 ರಿಂದ 40 ರು.ಗೆ , ದ್ವಿಚಕ್ರ ವಾಹನಕ್ಕೆ 20ರಿಂದ 30 ರು.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರವಾಸಿಗರಿಗೆ ಈ ಹಿಂದೆ ಒಬ್ಬರಿಗೆ 10 ರು. ಪ್ರವೇಶ ದರವಿತ್ತು. ಈಗ ಅದನ್ನು 20 ರು. ಹೆಚ್ಚಿಸಲಾಗಿದೆ. ವಿದೇಶ ಪ್ರವಾಸಿಗರಿಗೆ ಈ ಹಿಂದೆ ಇದ್ದ 50 ರು., ಪ್ರವೇಶ ದರವನ್ನು 100 ರು. ಹೆಚ್ಚಿಸಲಾಗಿದೆ. ಜೊತೆಗೆ ಹೊಸದಾಗಿ ಕೆಲ ಶುಲ್ಕವನ್ನು ವಿಧಿಸಿದ್ದು, ಇನ್ನು ಮುಂದೆ ಜೋಗ ವೀಕ್ಷಣೆಗೆ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ 10 ರು.ಶುಲ್ಕವನ್ನು ನಿಗದಿ ಮಾಡಲಾಗಿದೆ. ಜೊತೆಗೆ ಜೋಗ ವೀಕ್ಷಣೆ ವೇಳೆ ಕ್ಯಾಮೆರಾ ತೆಗೆದುಕೊಂಡು ಹೋದರೂ ಅದಕ್ಕೂ 100 ರು. ಶುಲ್ಕವನ್ನು ನಿಗದಿಪಡಿಸಲಾಗಿದೆ. ಡ್ರೋನ್‌ ಕ್ಯಾಮೆರಾ ತೆಗೆದುಕೊಂಡು ಹೋಗುವವರು 500 ರು. ಪ್ರದೇಶ ಶುಲ್ಕವನ್ನು ಪಾವತಿಸಬೇಕಿದೆ. ವಿಕಲಚೇತನರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು, ಟಿ.ವಿ.ಮಾಧ್ಯಮದವರಿಗೆ ಉಚಿತ ಪ್ರವೇಶವಿದೆ ಎಂದು ಜೋಗ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *