ಹುಬ್ಬಳ್ಳಿ: ಹುಬ್ಬಳ್ಳಿ – ಲಕ್ಷೇಶ್ವರ ರಾಜ್ಯ ಹೆದ್ದಾರಿ ಬಳಿಯ ನೂಲ್ವಿ ಕ್ರಾಸ್ ಸಂಪೂರ್ಣ ತ್ಯಾಜ್ಯ ವಿಲೇವಾರಿ ತಾಣವಾಗಿದೆ . ಹೀಗಾಗಿ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ರೋಗದ ಭೀತಿ ಎದುರಾಗಿದೆ.
ನೂಲ್ವಿ ಕ್ರಾಸ್ ಬಯಲಿನಲ್ಲಿ ಎಲ್ಲೆಂದರಲ್ಲಿ ಕ ರಾಶಿ ಬಿದ್ದಿದ್ದು ಸಾರಾಯಿ ಬಾಟಲ್ , ತರಕಾರಿ ತ್ಯಾಜ್ಯ , ಹಣ್ಣು – ಹಂಪಲುಗಳ ತ್ಯಾಜ್ಯ ಸೇರಿ ಮಾಂಸ – ಮೊಟ್ಟೆಯ ತ್ಯಾಜ್ಯ ಎಸೆಯಲಾಗಿದೆ . ಹಾಗೂ ರಸ್ತೆಯ ಇನ್ನೊಂದು ಬದಿ ಕಟ್ಟಡದ ಕಸದ ಅವಶೇಷ ತಂದು ಸುರಿಯಲಾಗಿದೆ . ಇದರಿಂದ ದುರ್ವಾಸನೆ ವಿಪರೀತವಾಗಿದ್ದು ನಾಯಿಗಳ ಹಾವಳಿ ಹೆಚ್ಚಾಗಿದೆ . ಈ ಸ್ಥಳದಲ್ಲಿ ವಾಹನ ಚಲಾಯಿಸುವುದೇ ದುಸ್ತರವಾಗಿದ್ದು , ನೂಲ್ವಿ ಹಾಗೂ ಅದರಗುಂಚಿ ಮಧ್ಯವೇ ಇಂತಹ ಅವ್ಯವಸ್ಥೆ ಏರ್ಪಟ್ಟಿದೆ . ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

