ಕಲಘಟಗಿ : ತಾಲೂಕಿನಲ್ಲಿ ಗಳಗಿ ಹುಲಕೊಪ್ಪ ಗ್ರಾಮ ಪಂಚಾಯತಿಯಲ್ಲಿ ನ.22 ರಂದು ಕನಕದಾಸರ ಜಯಂತಿಯನ್ನು ಕಾಟಾಚಾರದಿಂದ ಝರಾಕ್ಷ್ ಪ್ರತಿ ಇಟ್ಟು ಆಚರಿಸಲಾಗಿತ್ತು.ಇದನ್ನು

ಬಿಗ್ ಟಿವಿ ವಾಹಿನಿ. ವರದಿ ಮಾಡಿತ್ತು..ಈ ಕುರಿತು ಗ್ರಾಮಸ್ಥರಿಂದ ದೂರುಗಳು ಕೂಡ ಕೇಳಿಬಂದಿದ್ದು,ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಕೂಡ ಕಾಟಾಚಾರಕ್ಕೆ ಆಚರಿಸಲಾಗಿತ್ತು.
ಇದೀಗ ಕನಕದಾಸರ ಜಯಂತಿಯನ್ನು ಈ ರೀತಿ ಆಚರಿಸಿದ್ದು ವಿಪರ್ಯಾಸವೇ ಸರಿ.ವರದಿ ನೋಡಿದ ಹಿರಿಯ ಅಧಿಕಾರಿಗಳಾದ
ತಾ.ಪಂ.ಪ್ರಭಾರ ಇ.ಓ.ಎಸ್.ವಿ ಮಠಪತಿ ಅವರು ಪಿಡಿಓ ಆನಂದ ಅವರಿಗೆ ಕಾರಣ ಕೇಳಿ ಅವರಿಗೆ ನೋಟಿಸ್ ನೀಡಿದ್ದಾರೆ.

ಒಟ್ಟಿನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಪಿಡಿಓ ಅವರು ಈಗಲಾದರೂ ನಾಡು ನುಡಿಗೆ ಶ್ರಮಿಸಿದ ಹಾಗೂ ಧಾರ್ಮಿಕ ಆಚರಣೆಗೆ ಒತ್ತು ಕೊಡುತ್ತಾರಾ ಕಾದ ನೋಡಬೇಕಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news

