Breaking News

ವಿಶೇಷ ವಾಗಿ ಶಾಲಾ ಆರಂಭೋತ್ಸವ ಚಾಲನೆ


ಹೆಬ್ಬಳ್ಳಿ : ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಜನತಾ ಪ್ಲಾಟ ಹೆಬ್ಬಳ್ಳಿ, ಸದ್ಯದಲ್ಲೇ ದತ್ತಿನಿಧಿ ಸ್ಥಾಪನೆ, ಶಾಲಾ ಆರಂಭೋತ್ಸವದಲ್ಲಿ ಮುಖ್ಯ ಶಿಕ್ಷಕಿ ಗೀತಾ ದೊಡಮನಿ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಜನತಾ ಪ್ಲಾಟಿನಲ್ಲರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರಂಭೋತ್ಸವಕ್ಕೆ ನಿನ್ನೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ವಾಸಂಬಿ ಹಾಜರಿದ್ದು ಮಕ್ಕಳಿಗೆ ಸಿಹಿ ಹಂಚಿದರು, ಮಳೆಬಿಲ್ಲು ಕಾರ್ಯಕ್ರಮ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಇಮಾಮಸಾಬ ಕೊಣ್ಣೂರ ಅಮಿನಸಾಬ ದೊಡಮನಿ ದೂದುಸಾಬ ಗುಡಸಲಮನಿ, ಶಾಲಾಭಿವೃದ್ದಿ ಸಮಿತಿಯ ಉಪಾದ್ಯಕ್ಷರಾದ ನಿರ್ಮಲ ದೇಸಾಯಿ,ಮುಖ್ಯ ಶಿಕ್ಷಕಿ‌ ಗೀತಾ ದೊಡಮನಿ ಎಲ್ಲಾ ಶಿಕ್ಷಕರು ಮಕ್ಕಳು ಹಾಜರಿದ್ದರು, ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಗೀತಾ ದೊಡಮನಿ ಮಾತನಾಡಿ, ಶಾಲೆ ಹೊರಾಂಗಣ ತುಂಬಾ ದೊಡ್ಡದಿದೆ, ಈ ಮೈದಾನದಲ್ಲಿ ಗಿಡಗಳನ್ನು ಬೆಳೆಸೋಣ, ಜೊತೆಗೆ ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನರವರಿಂದ ಸದ್ಯದಲ್ಲೇ ದತ್ತಿನಿಧಿಯನ್ನು ಸ್ಥಾಪಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು, ಸಿ ಡಿ ಬುಯ್ಯಾರ ಎಸ್ ಎಸ್ ದಳವಾಯಿ, ಎಸ್ ಎಸ್ ಸಾಂಬ್ರಾಣಿ ಮುಂತಾದವರು ಇದ್ದರು, ಚಂಪಾ ನರೇಗಲ್ ಸ್ವಾಗತಿಸಿದರು, ಸೀಮಾ ದೇಸಾಯಿ ನಿರೂಪಿಸಿದರು,, ರಾಜೇಶ್ವರಿ ಕೋಡಬಾಳ ಇದ್ದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *