Breaking News

ಆನ್ ನಲ್ಲಿ ಕಾರು ಬಾಡಿಗೆ ಹುಡುಕಾಡುವ ಮುನ್ನ ಎಚ್ಚರ ಎಚ್ಚರ

ಹುಬ್ಬಳ್ಳಿ : ಪುಣೆಯಲ್ಲಿ ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ನೀಡುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಂದ 32,000 ರೂ . ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಉಣಕಲ್‌ನ ಲಲಿತಾ ಎಂಬುವರು ಪುಣೆಗೆ ಹೋಗಿ ಸ್ಥಳೀಯವಾಗಿ ಸುತ್ತಾಡುವ ಸಲುವಾಗಿ ಸೆಲ್ಫ್ ಡ್ರೈವಿಂಗ್ ಕಾರು ಬೇಕೆಂದು ಗೂಗಲ್‌ನಲ್ಲಿ ಹುಡುಕಾಡಿದ್ದರು . ಅದರಲ್ಲಿ ಸಿಕ್ಕ ಕೃಷ್ಣ ಕಾರ್ ರೆಂಟಲ್ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ಹೆಸರು ವಿಳಾಸ ದಾಖಲಿಸಿ ಸಬ್‌ಮಿಟ್ ಮಾಡಿದ್ದರು . ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ ವೆಬ್‌ಸೈಟ್ ಮೂಲಕ 100 ರೂ . ವರ್ಗಾಯಿಸಿ ಎಂದು ಹೇಳಿದ್ದ ಇದನ್ನು ನಂಬಿದ ಲಲಿತಾ ಅವರು ಡೆಬಿಟ್ ಕಾರ್ಡ್‌ನ ಕೆಲ ಮಾಹಿತಿ ಹಾಕಿ 100 ರೂ ವರ್ಗಾಯಿಸಿದ್ದರು . ಇದನ್ನೇ ದುರುಪಯೋಗಪಡಿಸಿಕೊಂಡ ವಂಚಕರು ಲಲಿತಾ ಅವರಿಗೆ ಗೊತ್ತಾಗದಂತೆ 32 ಸಾವಿರ ರೂ ವರ್ಗಾಯಿಸಿಕೊಂಡು ದೂರಿನಲ್ಲಿ ಆರೋಪಿಸಲಾಗಿದೆ

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *