Breaking News

ವರುಣನ ಆರ್ಭಟಕ್ಕೆ ಪೇಡಾ ನಗರಿ ಜನತೆ ಚಲ್ಲಾಪಿಲ್ಲಿ

ಧಾರವಾಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಪೇಡಾ ನಗರಿ ಧಾರವಾಡದ ಜನತೆಗೆ ಇಂದು ಮಧ್ಯಾಹ್ನವೇ ಮಳೆರಾಯ ತಂಪೇರೆದಿದ್ದಾನೆ. ಮುಂಜಾನೆಯಿಂದಲ್ಲೇ ನಗರದಲ್ಲಿ ಮೋಡ ಮುಸುಕಿನ ವಾತಾವರಣ ಕಂಡುಬಂದಿತ್ತು. ಆದರೆ ಮದ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದ್ದು, ಮಳೆರಾಯನಿಂದ ತಪ್ಪಿಸಿಕೊಳ್ಳಲು ಕೆಲಕಾಲ ವಾಹನ ಸವಾರರ ಓಡಾಟ ನಡೆಸಿದರು.

ನಗರದ ಜಿಲ್ಲಾಧಿಕಾರಿ ಆವರಣ, ಹೊಸಯಲ್ಲಾಪುರ, ಮಾಳಮಡ್ಡಿ, ತೇಜಸ್ವಿ‌ನಗರ, ಕಲ್ಯಾಣ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ವರುಣ ಅರ್ಭಟಿಸಿದ್ದಾನೆ. ಇನ್ನೂ ಮಳೆರಾಯನ ಅರ್ಭಟಕ್ಕೆ ಕಚೇರಿ ಕೆಲಸಗಳಿಗೆ ತೆರಳಿದ್ದ ಸಾರ್ವಜನಿಕರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ‌ವಾಹನಸವಾರರು ವರುಣ ಹನಿಯಿಂದ ತೊಪ್ಪಿಸಿಕೊಳ್ಳಲು ಅನಿವಾರ್ಯವಾಗಿ ರಸ್ತೆ ಬದಿಯ ಅಂಗಡಿಗಳ ಮೊರೆ ಹೋಗುವ ದೃಶ್ಯಗಳು ಸಾಮನ್ಯವಾಗಿದ್ದವು.

ಸದ್ಯ ನಗರದಾದ್ಯಂತ ಇನ್ನೂ ಮೋಡ ಮುಸುಕಿನ ವಾತಾವರಣದ ಜೊತೆಗೆ ತುಂತುರು ಮಳೆ ಮುಂದುವರೆದಿದ್ದು, ಮತ್ತೆ ಸಂಜೆಯವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೋಡ ಮುಸುಕಿನ ವಾತಾವರಣ ಮುಂದುವರೆದಿರುವುದರಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *