Breaking News

ಕುಸ್ತಿ ಪಂದ್ಯ : ಪೈಲ್ವಾನರ ಜಿದ್ದಾಜಿದ್ದಿಗೆ ಮನಸೋತ ಪ್ರೇಕ್ಷಕರು


ಹುಬ್ಬಳ್ಳಿ: ನಗರದ ಹೊರವಲಯದಲ್ಲಿರುವ ಗೋಕುಲ ಗ್ರಾಮದ ದಾರವತಿ ಆಂಜನೇಯ ಜಾತ್ರೆ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು. ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಇಂತಹ ಸ್ಪರ್ಧೆಗಳು ನಡೆದಿರಲಿಲ್ಲ. ಈ ಬಾರಿ ನಡೆದ ಕುಸ್ತಿ ಪಂದ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳ ಕುಸ್ತಿಪಟುಗಳು ಕಾದಾಡಿದರು. ಗೋಕುಲ ಗ್ರಾಮದ ಹಿರಿಯ ಪೈಲ್ವಾನರು ಹಾಗೂ ಕುಸ್ತಿ ಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯಗಳನ್ನು ಕಟ್ಟಿದರು. ಇದರಿಂದ ಪ್ರತಿ ಸ್ಪರ್ಧೆಗಳು ರಂಗೇರಿದ್ದವು.
ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಪೈಲ್ವಾನ್ ಹುರುದುಂಬಿವಿಕೆ
ಕುಸ್ತಿ ಅಖಾಡದಲ್ಲಿ ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ ಓಹೋ… ಎಂದು ಉದ್ಗಾರ ತೆಗೆಯುತ್ತಿದ್ದರು. ಮೈ ನವಿರೇಳಿಸುವಂತಿದ್ದ ಪುರುಷ ಹಾಗೂ ಮಹಿಳಾ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಯಿತು.

ಮಾಜಿ ಪೈಲ್ವಾನರ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ಸ್ಪರ್ಧೆಗೆ ಚಾಲನೆ ನೀಡಿದರು.ದಾವಣಗೆರೆಯ ಕಿರಣ್, ಹಳಿಯಾಳದ ಲಕ್ಷ್ಮಿ ಪ್ರಥಮ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಕಿರಣ್ ಭದ್ರಾವತಿ ಅವರಿಗೆ ₹20 ಸಾವಿರ, ದ್ವಿತೀಯ ಸ್ಥಾನ ಪಡೆದ ಮೈಸೂರಿನ ಯಶವಂತ ಅವರಿಗೆ ₹15 ಸಾವಿರ ಮತ್ತು ಬೆಳ್ಳಿ ಗದೆ (ಅತ್ಯುತ್ತಮ ಪ್ರದರ್ಶನಕ್ಕಾಗಿ) ಹಾಗೂ ತೃತೀಯ ಸ್ಥಾನ ಪಡೆದ ಬೆಳಗಾವಿಯ ಶಿವಯ್ಯ ಪೂಜಾರ ಅವರಿಗೆ ₹12 ಸಾವಿರ ಬಹುಮಾನ ನೀಡಲಾಯಿತು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹಳಿಯಾಳ ಕ್ರೀಡಾ ಹಾಸ್ಟೆಲ್‌ನ ಲಕ್ಷ್ಮಿ ಪಾಟೀಲ ಅವರಿಗೆ ₹10 ಸಾವಿರ, ದ್ವಿತೀಯ ಸ್ಥಾನ ಪಡೆದ ಗದುಗಿನ ಶಾಹಿದಾ ಅವರಿಗೆ ₹5 ಸಾವಿರ ಹಾಗೂ ತೃತೀಯ ಸ್ಥಾನದ ಪಡೆದ (ಪಂದ್ಯ ಡ್ರಾ) ಹಳಿಯಾಳದ ವೈಷ್ಣವಿ ಅಣ್ಣಿಕೇರಿ ಮತ್ತು ಧಾರವಾಡ ಕ್ರೀಡಾ ಹಾಸ್ಟೆಲ್‌ನ ಪುಷ್ಪಾ ನಾಯ್ಕ ಅವರಿಗೆ ತಲಾ ₹2,500 ಬಹುಮಾನ ವಿತರಿಸಲಾಯಿತು.

ಪೈಲ್ವಾನರಾದ ಅಲ್ತಾಫ್ ಶೇಖ, ಭೀಮಸಿ ಪರಾಪುರ, ಯಲ್ಲಪ್ಪ ಡೋಣಿ, ರಾಮಣ್ಣ ಉಣಕಲ್ಲ, ರುದ್ರಪ್ಪ ರಾಯನಾಳ ತೀರ್ಪುಗಾರರಾಗಿದ್ದರು. ಗೋಕುಲ ರಸ್ತೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ, ರಾಮಣ್ಣ ಉಣಕಲ್ಲ, ಸಂತೋಷ ಇಂಚಲ, ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್‌ ಅಧ್ಯಕ್ಷ ಅಶೋಕ ಚಿಲ್ಲಣ್ಣವರ, ರಾಯನಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೈಲ್ವಾನ್ ಸಿದ್ದಪ್ಪ ಸಂಪನ್ನವರ ಇದ್ದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *