Breaking News

ಯೂಟ್ಯೂಬ್​ ನೋಡಿ ಕಳ್ಳತನ ಮಾಡ್ತಿದ್ದವ ಸಿಕ್ಕಿಬಿದ್ದ!!

ಕೀ ಬಳಸಿ ಕಳ್ಳತನ ಮಾಡುತ್ತಿದ್ದವನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಪ್ರಕಾಶ್​ ಅಲಿಯಾಸ್​ ಬಾಲಾಜಿ (43) ಬಂಧಿತ ಆರೋಪಿ. ಆರೋಪಿ ​ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿವೆ. ಆರೋಪಿ ಪ್ರಕಾಶ್ ಉತ್ತರಹಳ್ಳಿಯಲ್ಲಿ ತನ್ನ ಪತ್ನಿ ಜೊತೆಗೆ ವಾಸವಾಗಿದ್ದನು. ಯೂಟ್ಯೂಬ್​ನಲ್ಲಿ ಕಳ್ಳತನದ ವಿಡಿಯೋ ನೋಡಿ ಹೊಸ ಹೊಸ ಮಾದರಿಯಲ್ಲಿ ಕಳ್ಳತನ ಮಾಡುತ್ತಿದ್ದನು. ಕದ್ದ ಚಿನ್ನಾಭರಣವನ್ನು ರಾಜೀವ್ ಎಂಬಾತನಿಂದ ಮಾರಾಟ ಮಾಡಿಸುತ್ತಿದ್ದನು.ಪೊಲೀಸರಿಗೆ ಆರೋಪಿ ಪ್ರಕಾಶ್​ ಅತ್ತಿಬೆಲೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿ ಪ್ರಕಾಶ್​ನನ್ನು ಬಂಧಿಸಿದ್ದಾರೆ.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *