Breaking News

ವರುಣಾರ್ಭಟ : ಅವಳಿ ನಗರದ ಜನರ ಜೀವನ ಅಸ್ತವ್ಯಸ್ತ

ಧಾರವಾಡ : ಇವತ್ತು ಬೆಳಗ್ಗೆ ಮತ್ತೆ ಅಬ್ಬರಿಸಿದ ವರುಣ ಧಾರವಾಡ ಜಿಲ್ಲೆಯ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಧಾರವಾಡ ನಗರದ ಹಾವೇರಿಪೇಟ ಬಡಾವಣೆ, ಶುಕ್ಲಾ ವಠಾರ, ಕಂಠಿಗಲ್ಲಿ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಶುಕ್ಲಾ ವಠಾರದ 9 ಮನೆಗಳಿಗೆ ಅಕ್ಷರಶಃ ಜಲದಿಗ್ಬಂಧನವಾಗಿತ್ತು.

ಇನ್ನು ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲಗಳೇ ಕೆರೆಯಂತಾಗಿವೆ. ಹಳ್ಳಗಳು ಭೋರ್ಗರೆಯುತ್ತಿರೋದ್ರಿಂದ ಕುಂದಗೋಳ ತಾಲೂಕಿನ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಬ್ರಿಡ್ಜ್ ಮುಳುಗಡೆಯಾಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಚಿಕ್ಕನರ್ತಿ, ಹಿರೆನರ್ತಿ, ಯರಗುಪ್ಪಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *