Breaking News
Featured Video Play Icon

Meter ಬಡ್ಡಿ ಸಾಲ : ವ್ಯಕ್ತಿಗೆ ಹಿಗ್ಗಾಮುಗ್ಗಾ ತಳಿತ, ಜೀವ ಬೆದರಿಕೆ..?

Meter ಬಡ್ಡಿ ಸಾಲ : ವ್ಯಕ್ತಿಗೆ ಹಿಗ್ಗಾಮುಗ್ಗಾ ತಳಿತ, ಜೀವ ಬೆದರಿಕೆ
ಹುಬ್ಬಳ್ಳಿ : ಕಷ್ಟ ಎಂದು ಬಡಿಸಾಲವನ್ನು ತೆಗೆದುಕೊಂಡ ವ್ಯಕ್ತಿಯ ಸ್ಥಿತಿವೂ ಅಯೋಮಯವಾಗಿದೆ. ಆ ವ್ಯಕ್ತಿಯನ್ನು ಕರೆಯಿಸಿ ಹಿಗ್ಗಾಮುಗ್ಗಾ ತಳಿಸಿ ಶರ್ಟ್ ಹರಿದು,ಆತನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.

ಸಾಗರ ಎಂಬುವರೇ ಹಲ್ಲೆಗೊಳಗಾದ ವ್ಯಕ್ತಿ. ಹಳೆ ಹುಬ್ಬಳ್ಳಿಯ ನಿವಾಸಿಯಾದ್ದಾರೆ. ನಾಲ್ಕು ವರ್ಷಗಳ ಹಿಂದೆ ಬಡ್ಡಿ ಸಾಲದ ರೂಪದಲ್ಲಿ 1 ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದರು,ಅದಕ್ಕೆ ಪ್ರತಿ ತಿಂಗಳು 10 ಸಾವಿರ ರೂ ಬಡ್ಡಿ ಕೂಡ ಕೊಡುತ್ತಿದ್ದರು. ಇಂದು ಬೆಳೆಗ್ಗೆ 6 ಗಂಟೆಗೆ ಮಹೇಶ ತಳವಾರ ಎಂಬುವವವರಿ ಏಕಾಏಕಿ ಬಂದು ಹುಬ್ಬಳ್ಳಿಯ ಗೋಪನಕೊಪ್ಪಕ್ಕೆ ಮಾತನಾಡುವುದಾಗಿ ಕರೆದುಕೊಂಡು ಹೋಗಿ ಅಲ್ಲಿ ಸಾಗರನಿಗೆ ಹಿಗ್ಗಾಮುಗ್ಗಾ ತಳಿಸಿ ಆತನ ಮೊಬೈಲ್ ಹಾಗೂ ಬೈಕ್ ಕಸಿದುಕೊಂಡಿದ್ದಾರೆ. ನಂತರ ಆತನನ್ನು ಸಿಬಿಟಿ ಕರೆದುಕೊಂಡು ಹೋಗಿ ಅಲ್ಲಿ ಕೂಡ ಒಂದೆರಡು ಏಟು ಹೊಡೆದಿದ್ದಾರೆ. ಈ ವೇಳೆ ಜಾವೀದ್ ಸವಣೂರು ಎಂಬುವವರು ಕೂಡ ಇತನ ಶರ್ಟ ಕೊರಳ ಪಟ್ಟಿ ಹಿಡಿದು ಎಳೆದಾಡಿ ಶರ್ಟ ಹರಿದು ಹಲ್ಲೆ ಮಾಡಿದ್ದಾರೆ,ಅಷ್ಟರಲ್ಲಿ ಸಾಗರ ತನ್ನ ಜೀವಕ್ಕೆ ಏನಾದರು ಹೆಚ್ಚು ಕಡಿಮೆ ಮಾಡುತ್ತಾರೆಂದು ಅಲ್ಲಿಂದ ತಪ್ಪಸಿಕೊಳ್ಳಲು ಓಡಿ ದೇಶಪಾಂಡೆ ನಗರದ ಕಡೆ ಓಡಿ ಬಂದಿದ್ದಾರೆ.

ಈ ಘಟನೆ ಹಳೇ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ನಡೆದಿದ್ದು,ಹಲ್ಲೆಗೆ ಒಳಗಾದ ವ್ಯಕ್ತಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು,ನನ್ನ ಮನೆಗೆ ರಾತ್ರಿ ಎರಡು ಗಂಟೆಗೆ ಬಂದು ಮನೆ ಬಾಗಿಲು ತಟ್ಟುತ್ತಾರೆ ಮತ್ತು ಅವ್ಯಾಚ ಶಬ್ದಗಳಿಂದ ಜೋರಾಗಿ ಬೈದು,ಅಕ್ಕ ಪಕ್ಕದ ಮನೆಯವರ ಮುಂದೆ ನನಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Share News

About Shaikh BigTv

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *