ನವಲಗುಂದ: ಸ್ವಾತಂತ್ರ್ಯವೆಂದರೆ ಸ್ಟೇಚ್ಚೆಯಲ್ಲ, ಅದರ ಇತಿಮಿತಿಯನ್ನು ಅರಿತು ಪ್ರಜೆಗಳಾದ ನಾವು ಅಭಿವೃದ್ಧಿಯನ್ನು ಹೊಂದುವುದರ ಜೊತೆಗೆ, ಪರಿಸರ ಸಂರಕ್ಷಣೆ, ರಾಷ್ಟ್ರ ರಕ್ಷಣೆ ಮಾಡುವುದು ನಮ್ಮ ಹೊಣೆಯಾಗಿದೆ ಎಂದು ಬಿ.ವಿ.ಏಣಗಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ ಬಾಗಡಿ ಮಾತನಾಡಿ, ರಾಷ್ಟ್ರದ ಕೀರ್ತಿಯನ್ನು ಮೆರೆದ ಒಲಂಪಿಕ್ಸ್ ಆಟಗಾರರನ್ನು ನೆನೆಯುತ್ತಾ, ದೇಶಭಕ್ತಿ, ಮಾನವೀಯತೆ, ಮುಂತಾದ ಮೌಲ್ಯಗಳು ಸ್ವಾತಂತ್ರ್ಯದ ಗಣತೆಯನ್ನು ಎತ್ತಿ ಹಿಡಿಯಬಲ್ಲವು, ವಿದ್ಯಾರ್ಥಿಗಳಾದ ತಾವು ಇವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಮಹಾನ್ ನಾಯಕರಾಗಬೇಕೆಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ವೇಳೆ ಬಸವರಾಜ ಸೂಡಿ, ಸವಿತಾ ಚಿಕ್ಕಣ್ಣವರ, ವಿನಾಯಕ ಮಿರಜಕರ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

