Breaking News

ಗುಟ್ಕಾ ವಿಷಯಕ್ಕೆ ಬಿತ್ತು ಹುಬ್ಬಳ್ಳಿ ಯುವಕನ ಹೆಣ

ಹುಬ್ಬಳ್ಳಿ: ಆನಂದ ನಗರದಲ್ಲಿ ವಿಮಲ್ (ಗುಟ್ಕಾ) ಕೊಡಿಸಲಿಲ್ಲ ಎಂಬ ವಿಷಯಕ್ಕೆ ರೌಡಿಶೀಟರ್ ಒಬ್ಬ ಅಮಾಯಕ ವ್ಯಕ್ತಿಗೇ ಚಾಕು ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಆನಂದ ನಗರದ ಮೆಹಬೂಬ್ ಕಳಸ ಹಾಗೂ ಕೊಲೆ ಮಾಡಿ ಪರಾರಿಯಾಗಿರುವ ಗೌಸ್ ಎಂಬಾತ ಪರಸ್ಪರ ಪರಿಚಯಸ್ಥರು, ನಿನ್ನೇ ಕೂಡಾ ಇಬ್ಬರು ಮಂಜುನಾಥ ನಗರದ ಬಳಿ ಇರುವ ಕೊಡೆ ಬಾರ್ ನಲ್ಲಿ ಸಾರಾಯಿ ಕುಡಿದಿದ್ದಾರೆ.

ಬಾರ್ ನಿಂದ ಹೊರಬಂದ ನಂತರ ಗೌಸ್,ಮೆಹಬೂಬ್ ಗೇ ವಿಮಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ, ಆದ್ರೆ ಮೆಹಬೂಬ್ ವಿಮಲ್ ಕೊಡಿಸಲು ಹಿಂದೇಟು ಹಾಕಿದಾಗ, ಕುಡಿದ ಮತ್ತಿನಲ್ಲಿದ್ದ ಗೌಸ್ ಮೆಹಬೂಬ್ ಗೇ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿಯುತ್ತಿದ್ದ ಹಾಗೇ ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕೆಲಹೊತ್ತು ದೂರ ನಡೆದುಕೊಂಡು ಹೋಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಕೂಡಲೇ ಆತನನ್ನು ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ,ಆದ್ರೆ ಅದಾಗಲೇ ಮೆಹಬೂಬ್ ನ ಪ್ರಾಣ ಪಕ್ಷಿ ಹಾರಿಹೋಗಿದೆ.

ಮೆಹಬೂಬ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದ ಹಾಗೆ,ಗೌಸ್ ಪರಾರಿಯಾಗಿದ್ದು ಆತನ ಪತ್ತೆಗೆ ಇದೀಗ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಜಾಲ ಬಿಸಿದ್ದಾರೆ

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *