ಬೆಂಗಳೂರು: 2021ರ ಕೆಎಎಸ್ ಮುಖ್ಯ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪತ್ರ ಬರೆದು ಮೌಲ್ಯ ಮಾಪನ ಆರಂಭಗೊಂಡಿದ್ಯಾ ಅಥವಾ ಇಲ್ಲವಾ ಎಂಬುದಾಗಿ ಕೋರಿದ್ದರು. ಆದ್ರೇ.. ಈವರೆಗೆ ಯಾವುದೇ ಉತ್ತರ ಕರ್ನಾಟಕ ಲೋಕಸೇವಾ ಆಯೋಗದಿಂದ ಬಾರದ ಕಾರಣ, ಕೆಪಿಎಸ್ಸಿ ವಿರುದ್ಧ ಸಿಡಿದೆದ್ದಿದ್ದಾರೆ. ಮೇ.31, 2022ರಂದು ಆಯೋಗದ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, 2021ರ ಫೆಬ್ರವರಿಯಲ್ಲಿ ನಡೆದಿದ್ದಂತ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನ ಕುರಿತಂತೆ ಕೆಪಿಎಸ್ಸಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೋರಲಾಗಿತ್ತು. ಮೌಲ್ಯಮಾಪನ ಪ್ರಕ್ರಿಯೆ ಈವರೆಗೆ ಪ್ರಾರಂಭವಾಗಿದ್ಯೋ, ಇಲ್ಲವೋ ಎಂದು ಕೇಳಲಾಗಿತ್ತ. ಆದ್ರೇ.. ಈವರೆಗೆ ನನಗಾಗಲೀ, ಅಭ್ಯರ್ಥಿಗಳಿಗಾಗಲೇ ಯಾವುದೇ ಮಾಹಿತಿ, ಉತ್ತರ ಬಂದಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

