Breaking News

ಮಳೆಗಾಗಿ ಜಾಲಿಗಿಡದಲ್ಲಿ ಪೂಜೆ,ಬೆಳಗಾವಿಯಲ್ಲಿ ಮರ ಏರಿದ ಸ್ವಾಮೀಜಿ

ಬೆಳಗಾವಿ; ರಾಜ್ಯದ ಎಲ್ಲೆಡೆ ಮಳೆಗಾಗಿ ವಿಶೇಷ ಆಚರಣೆಗಳು ನಡೆಯುತ್ತಿವೆಯಾದ್ರೂ ಈವರೆಗೂ ಪರಿಪೂರ್ಣ ಮಳೆಯ ಆಗಮನ ಆಗಿಲ್ಲ. ಹಾಗಾಗಿ ಮಳೆಗಾಗಿ ಮುಳ್ಳಿನ ಮರದ ಮೇಲೆ ( ಜಾಲಿಗಿಡ ) ಮಹಾರಾಜ ಸಾಧು ಒಬ್ಬರು ಪ್ರಾರ್ಥಿಸಿರುವ ವೀಡಿಯೋ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಸುರೇಶ್ ಮಹಾರಾಜರು ಅಥಣಿ ತಾಲೂಕಿನ ಕರ್ಲಟ್ಟಿ ಗ್ರಾಮದಲ್ಲಿ ಮುಳ್ಳಿನ ಮರವೇರಿ ವಿಭಿನ್ನ ರೀತಿಯಲ್ಲಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಮಳೆ ಬಾರದಿರುವ ಸಲುವಾಗಿ ಮುಳ್ಳಿನ ಮರವೇರಿ ಪ್ರಾರ್ಥಿನೆ ಸಲ್ಲಿಸಿದ್ದು, ಜೂನ್ ತಿಂಗಳು ಕಳೆಯುತ್ತ ಬಂದರೂ ಕೂಡಾ ಮಳೆಯಾಗದ ಹಿನ್ನಲೆ ಮಳೆಗಾಗಿ ಮುಳ್ಳಿನ ಮರವೇರಿದ್ದಾರೆ. ಸುರೇಶ ಮಹರಾಜರು ಪ್ರತಿ ಸಲ ಮಳೆಬಾರದೆ ಇದ್ದ ಸಮಯದಲ್ಲಿ ಮುಳ್ಳಿನ ಮರವೇರಿ ಪ್ರಾರ್ಥನೆಗೆ ಮಾಡತ್ತಾರಂತೆ. ಈ ವರ್ಷವಯು ಕೂಡಾ ಕಾಲಕ್ಕೆ ಸರಿಯಾಗಿ ಮಳೆಯಾಗದ ಹಿನ್ನಲೆ ಮುಳ್ಳಿನ‌ ಮರವೆರಿ ಪ್ರಾರ್ಥನೆ ಮುಂದುವರಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *