ಕೋಲಾರ: ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಪತ್ನಿ ಅಕಸ್ಮಾತ್ ಆಗಿ ಸಿಲುಕಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಕೋಲಾರದ ಕಲ್ವಾಮಂಜಲಿ ಎಂಬ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಪ್ರೇಮಾ ಎಂಬ ಮಹಿಳೆ ರೋಟರ್ ಯಂತ್ರದ ಅಲುಗುಗಳಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪತಿ ರಾಜೇಶ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು.
ಕೃಷಿ ಯಂತ್ರಧಾರೆಯಡಿ ಟ್ರಾಕ್ಟರ್ ಬಾಡಿಗೆಗೆ ತಂದಿದ್ದು, ತಮ್ಮ ಜಮೀನಿನಲ್ಲಿ ಉಳುಮೆಗೆ ತೊಡಗಿದ್ದರು. ಅಕಸ್ಮಾತ್ ಆಗಿ ಯಂತ್ರದ ಅಲುಗುಗಳಿಗೆ ಪ್ರೇಮಾ ದೇಹ ಸಿಲುಕಿಕೊಂಡಿದ್ದು, ಏನಾಗಿದೆ ಎಂಬುದು ಅರಿವಿಗೆ ಬರುವಷ್ಟರಲ್ಲಿ ಅಲುಗಿಗೆ ಸಿಲುಕಿ ಆಕೆಯ ದೇಹ ಛಿದ್ರಗೊಂಡಿದೆ. ಮಾತ್ರವಲ್ಲ, ಒಂದು ಕೈ ತುಂಡಾಗಿ ದೂರದಲ್ಲಿ ಬಿದ್ದಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

